ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಹತ್ಯೆ ಪ್ರಯತ್ನ ಮಾಡಿದ ಅನೇಕರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖರಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರಿಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತರಾಗಿರುವ ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ರಾಮಚಂದ್ರ ನಾಯಕ ಅವರ ಮೇಲೆ ಈಚೆಗೆ ಮಾರಣಾಂತಕ ದಾಳಿ ನಡೆದಿತ್ತು. ಕೂದಲೆಳೆಯ ಅಂತರದಿoದ ಗೋಪಾಲಕೃಷ್ಣ ನಾಯಕ ಅವರು ತಪ್ಪಿಸಿಕೊಂಡಿದ್ದರು. ದುಷ್ಕರ್ಮಿಗಳ ದಾಳಿಗೆ ಒಳಗಾಗಿ ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದ ಅವರು ಕ್ರಮೇಣ ಚೇತರಿಸಿಕೊಂಡಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರು.
ಗೋಪಾಲಕೃಷ್ಣ ನಾಯಕ ಅವರ ಮೇಲೆ ಆರು ಜನ ದಾಳಿ ಮಾಡಿದ್ದು, ಪ್ರಕರಣದಲ್ಲಿ ಭಾಗಿಯಾದ 11ಕ್ಕೂ ಅಧಿಕ ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ ಅವರು ಸಹ ತಮ್ಮ ಆಪ್ತನ ಮೇಲಾಗಿರುವ ದಾಳಿಯನ್ನು ಖಂಡಿಸಿದ್ದು, ಪಾದರರ್ಶಕ ತನಿಖೆಗೆ ಸೂಚಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳಿಬ್ಬರ ಗುರುತು ಪತ್ತೆಯಾಗಿದ್ದು, ಅವರು ಮಾತ್ರ ಸಿಕ್ಕಿಬಿದ್ದಿಲ್ಲ.
ಗೋವಾದ ಮಕ್‌ದುಮ್ ಅಸ್ರಫ್ ನಗರ ಬಳಿಯ ಕೋನ್ಸುವಾಮ ಕೊರ್ಟಾಲಿಮ್ ನಿವಾಸಿ ಮೊಹಮ್ಮದ್ ಇಮ್ರಾನ ಸಲ್ಮಾನಿ (46 ವರ್ಷ) ಹಾಗೂ ಹಾವೇರಿ ಹಿರೇಕೆರೂರಿನ ಕೋಟೆ ಓಣಿಯ ಅಬ್ದುಲ್ ಗನಿ (31) ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರಿಬ್ಬರು ತಲೆಮರೆಸಿಕೊಂಡಿದ್ದು, ಸಾಕಷ್ಟು ಬಾರಿ ಪೊಲೀಸರು ಅವರ ಮನೆಗೆ ಹೋದರೂ ಸಿಕ್ಕಿಲ್ಲ. ವಿಚಾರಣೆಯ ಮುಂದಿನ ಹಂತವಾಗಿ ಅವರಿಬ್ಬರ ಬಂಧನ ಅನಿವಾರ್ಯವಾಗಿದ್ದು, ಅವರ ಬಗ್ಗೆ ಸುಳಿವು ಕೊಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸುಳಿವು ನೀಡಿದವರಿಗೆ 25 ಸಾವಿರ ರೂ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರ ಬಹಿರಂಗವಾಗುವುದಿಲ್ಲ. ಹೀಗಾಗಿ ಆ ಇಬ್ಬರನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805258