ಸರಕು ಸಾಕಾಣಿಕಾ ನಿಯಮಗಳ ಬಗ್ಗೆ ಅರಿವಿದ್ದರೂ ಅದನ್ನು ಲೆಕ್ಕಿಸದೇ ರಾಜಾರೋಷವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿಗಳನ್ನು RTO ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಸಾಮಗ್ರಿ ಸಾಗಿಸುತ್ತಿದ್ದ 17 ಟಿಪ್ಪರುಗಳನ್ನು ಹೊನ್ನಾವರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಪುವಿನಿಂದ ಹೊನ್ನಾವರದ ಕಡೆ ಭಾರೀ ಗಾತ್ರದ ಶಿಲೆಗಳು ಬರುತ್ತಿದ್ದವು. ಆ ಕಲ್ಲುಗಳನ್ನು ನೋಡಿದ ಅಧಿಕಾರಿಗಳು ಟಿಪ್ಪರಿಗೆ ಅಡ್ಡಲಾಗಿ ಕೈ ಮಾಇದರು. ತಪಾಸಣೆ ನಡೆಸಿದಾಗ ಟಿಪ್ಪರ್ ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಸಾಮಗ್ರಿ ತುಂಬಿರುವುದು ಗಮನಕ್ಕೆ ಬಂದಿತು. ಕೂಡಲೇ ಆ ಮಾರ್ಗವಾಗಿ ಬರುತ್ತಿದ್ದ 17 ಟಿಪ್ಪರನ್ನು ಅಧಿಕಾರಿಗಳು ವಶಕ್ಕೆಪಡೆದರು.
ಈ ಎಲ್ಲಾ ಲಾರಿಗಳಲ್ಲಿ ಬರುತ್ತಿದ್ದ ಕಲ್ಲುಗಳು ಕಾಸರಕೋಡದಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ವಾಣಿಜ್ಯ ಬಂದರಿನ ವಿಸ್ತರಣೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಬಳಕೆಗೆ ತಂದದ್ದಾಗಿದ್ದು, ಅಲ್ಲದ್ದ ಟಿಪ್ಪರುಗಳು ಉಡುಪಿಯ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎಂಬ ಮಾಹಿತಿಯಿದೆ. ಅತಿ ಬಾರದ ಲಾರಿಗಳ ಸಂಚಾರದಿAದ ಹೆದ್ದಾರಿಗೆ ಹಾನಿ ಆಗುವುದರ ಜೊತೆ ಅಪಘಾತ ಸಾಧ್ಯತೆ ಹೆಚ್ಚಿರುವುದರಿಂದ ಸದ್ಯ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗಿದೆ.