ಕಾರವಾರ ನಗರಸಭೆಗೆ ನೀರು ಸರಬರಾಜು ಮಾಡುವ ಕೊಳವೆ ಒಡೆದು ಹೋಗಿದೆ. ಹೀಗಾಗಿ ಅದರ ದುರಸ್ಥಿಗೆ ನಗರಸಭೆ ಶ್ರಮಿಸುತ್ತಿದ್ದು, ವಿವಿಧ ಕಡೆ ನೀರು ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ.
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಜೋನ್-2 ಪ್ರದೇಶದಲ್ಲಿ 300 ಎಮ್.ಎಮ್. ನೀರಿನ ಮುಖ್ಯ ಕೊಳವೆ ಒಡೆದು ಹೋಗಿದೆ. ಜೂ 4 ರಿಂದ ಜೂ 7ರವರೆಗೆ ಇದರ ದುರಸ್ಥಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕಾಜುಬಾಗ, ಕೋಡಿಬಾಗ ಮುಖ್ಯ ರಸ್ತೆ, ನಂದನಗದ್ದಾ, ಮಧ್ಯವಾಡ, ಶಿವಾಜಿವಾಡಾ, ಟೋಲ್‌ನಾಕಾ, ತಾಮಸೆವಾಡಾ ಭಾಗಗಳಿಗೆ ನೀರು ಸರಬರಾಜು ಆಗುವುದಿಲ್ಲ.
ಇದರೊಂದಿಗೆ ನದಿವಾಡ, ಅಂಬೇಡ್ಕರ್ ಕಾಲೋನಿ, ತೆಲಂಗ ರೋಡ್ ಚಂದ್ರಾದೇವಿ, ಗಿಂಡಿವಾಡಾ, ಸುಂಕೇರಿವರೆಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗಲಿದೆ. ದುರಸ್ಥಿ ಕಾಮಗಾರಿ ಕೈಗೊಳ್ಳಲಿರುವ ಕಾರಣ ಮೂರು ದಿನಗಳವರೆಗೆ ನೀರು ಸರಬರಾಜು ಮಾಡುವಲ್ಲಿ ತೊಂದರೆ ಆಗುವ ಬಗ್ಗೆ ನಗರಸಭೆ ಪೌರಾಯುಕ್ತರು ಹೇಳಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.