ಯಲ್ಲಾಪುರ ಬಸ್ ಡಿಪೋದ ಚಾಲಕರೊಬ್ಬರು ಭಟ್ಕಳ ದಂಪತಿ ಮೇಲೆ ದುರ್ವರ್ತನೆ ತೋರಿದ್ದಾರೆ. ಮಂಗಳೂರಿನಿoದ ಯಲ್ಲಾಪುರ ಕಡೆ ಹೋಗುವ ಬಸ್ ಚಾಲಕನ ವರ್ತನೆ ವಿರುದ್ಧ ದಂಪತಿ ನಿಗಮಕ್ಕೆ ದೂರು ನೀಡಿದ್ದಾರೆ.
ಮಂಗಳವಾರ ಭಟ್ಕಳದ ಮಣ್ಕುಳಿಯ ಗಣೇಶ ನಾಯ್ಕ ಹಾಗೂ ಅವರ ಪತ್ನಿ ಸಂಬAದಿಕರ ಮನೆಗೆ ಹೊರಟಿದ್ದರು. ಮುಂಡಳ್ಳಿಯಲ್ಲಿನ ಮನೆಗೆ ಹೊರಟಿದ್ದ ಅವರಿಗೆ ಮಾರುತಿ ಶೋರೂಮಿನ ಬಳಿ ಬಸ್ ಸಿಕ್ಕಿದ್ದು, ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಹಿಂದಿಕ್ಕುವ ಬರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬೈಕಿನಲ್ಲಿದ್ದ ದಂಪತಿ ಮೇಲೆ ಬಸ್ಸು ಹಾಯಿಸಲು ಮುಂದಾಗಿದ್ದರು. ಈ ವೇಳೆ ತಮ್ಮ ಸಮಯಪ್ರಜ್ಞೆಯಿಂದಾಗಿ ಗಣೇಶ ನಾಯ್ಕ ಅವರು ತಪ್ಪಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದಾದ ನಂತರವೂ ಬಸ್ ಚಾಲಕ ದಂಪತಿಯನ್ನು ಕೆಟ್ಟದಾಗಿ ನಿಂದಿಸಿದ ಆರೋಪ ಎದುರುಸುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಹೋಗಿ ಪ್ರಶ್ನಿಸಿದಾಗ, ಆ ಚಾಲಕ `ನಾನು ನಿಮ್ಮಿಬ್ಬರ ನೋಡುವುದೇ. ನಾನು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ನೋಡೋದಾ’ ಎಂದು ಉಡಾಫೆಯಿಂದ ಮಾತನಾಡಿದ್ದಾರೆ. ಅತಿ ವೇಗವಾಗಿ ಬಸ್ ಓಡಿಸಿದಲ್ಲದೇ ತಮ್ಮ ಜೀವದ ಬಗ್ಗೆ ಹಗುರವಾಗಿ ಮಾತನಾಡಿದ ಕಾರಣ ಚಾಲಕನ ವಿರುದ್ಧ ಗಣೇಶ ನಾಯ್ಕ ಅವರು ಗರಂ ಆಗಿದ್ದಾರೆ. ಈ ಬಗ್ಗೆ ಯಲ್ಲಾಪುರ ಡಿಪೋ ಮ್ಯಾನೇಜರಿಗೆ ಸಹ ಗಣೇಶ ನಾಯ್ಕ ಅವರು ಫೋನ್ ಮಾಡಿ ದೂರಿದ್ದು, ಅವರ ಸೂಚನೆ ಮೇರೆಗೆ ವಾಟ್ಸಪ್ ಮೂಲಕ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.