ಖಾಸಗಿ ಕಾರಿನಲ್ಲಿ ಖಾಕಿ ಸಮವಸ್ತ್ರದಲ್ಲಿ ಬರುವ ಅಧಿಕಾರಿಗಳು ಕರ್ನಾಟಕ – ಗೋವಾ ಗಡಿಯಲ್ಲಿ ವಸೂಲಿ ಶುರು ಮಾಡಿದ್ದಾರೆ. ಕರ್ನಾಟಕ ನೋಂದಣಿಯ ಎಲ್ಲಾ ವಾಹನಗಳನ್ನು ಹಿಡಿದು 500ರೂಪಾಯಿಗೆ ಕಡಿಮೆಯಿಲ್ಲದ ಹಾಗೇ ಹಣಪಡೆದು ಬಿಡುತ್ತಿದ್ದಾರೆ.
ಗೋವಾದ ಎಲ್ಲಡೆ ಡಿಜಿಟಲ್ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ನಿಯಮ ಮೀರಿ ವಾಹನ ಓಡಿಸುವವರನ್ನು ಈ ಚೆಕ್‌ಪೋಸ್ಟಿನ ಕ್ಯಾಮರಾ ಸೆರೆ ಹಿಡಿದು ದಂಡದ ನೋಟಿಸ್ ನೀಡುತ್ತದೆ. ಅದಾಗಿಯೂ, ಕರ್ನಾಟಕ ದಾಟಿದ 500ಮೀ ದೂರದಲ್ಲಿ ಗೋವಾ ಪೊಲೀಸರು ವಾಹನಗಳಿಗೆ ಅಡ್ಡಲಾಗಿ ಕೈ ಮಾಡಿ ಹಣ ಪೀಕುತ್ತಿದ್ದಾರೆ. ಇಲ್ಲಿ ಹಣ ಪಾವತಿಸಿ ಮುಂದೆ ಹೋದವರಿಗೆ ಡಿಜಿಟಲ್ ಚೆಕ್ ಪೋಸ್ಟಿನ ಮೂಲಕವೂ ದಂಡ ಬೀಳುತ್ತಿದೆ.
ರಾಮನಗರ-ಗೋವಾ ಮಾರ್ಗದ ಮೊಳೇಂ ಡಿಜಿಟಲ್ ಚೆಕ್‌ಪೋಸ್ಟಿನ ಅರ್ದ ಕಿಮೀ ದೂರದಲ್ಲಿ ಈ ದಿನ ಪೊಲೀಸರು ವಸೂಲಿಯಲ್ಲಿ ನಿರತರಾಗಿರುವ ದೃಶ್ಯ ಸೆರೆಯಾಗಿದೆ. ದಿನವಿಡೀ ಇಲ್ಲಿ ಪೊಲೀಸರು ನಿಂತು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜನ ದೂರಿದ್ದಾರೆ. ಡಿಜಿಟಲ್ ಚೆಕ್‌ಪೋಸ್ಟ್ ಬಂದ ಬಳಿಕ ಪೊಲೀಸರ ಆದಾಯದಲ್ಲಿ ಭಾರೀ ಪ್ರಮಾಣದ ಕುಸಿತವಾಗಿದ್ದು, ಅದರಿಂದ ಈ ಮಾರ್ಗ ಅನುಸರಿಸಿದ ಆರೋಪಗಳಿವೆ. ಬೇರೆ ಬೇರೆ ಊರುಗಳಿಂದ ಬರುವವರಿಗೆ ಗಡಿಯಲ್ಲಿಯೇ ಹಿಡಿದು ಅನಧಿಕೃತವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಪ್ರವಾಸಿಗರು ಬೇಸತ್ತಿದ್ದಾರೆ ಎಂದು ಪ್ರವಾಸಿಗರು ದೂರಿದ್ದಾರೆ.