ಭಟ್ಕಳದ ವ್ಯಾಪಾರಿ ಮಹಮದ್ ಶಬೀ ಅವರಿಗೆ ಅದೇ ಊರಿನ ಆಸಿಪ್ ಇಕ್ಬಾಲ್ ಅವರು ಮೋಸ ಮಾಡಿದ್ದಾರೆ. ನಕಲಿ ದಾಖಲಾತಿ ತೋರಿಸಿ 21 ಲಕ್ಷ ರೂ ಯಾಮಾರಿಸಿದ್ದಾರೆ.
ಭಟ್ಕಳದ ಸುಲ್ತಾನ್ ಸ್ಟೀಟಿನಲ್ಲಿ ಮಹಮದ್ ಶಬೀ ಅವರು ವಾಸವಾಗಿದ್ದರು. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವ ಅವರಿಗೆ ಬಂದರು ರಸ್ತೆ ಆಸಿಪ್ ಇಕ್ಬಾಲ್ ಅವರು ಪರಿಚಯರಾದರು. ಮೆಟ್ರೋ ಇನ್ಪೋಟೆಕ್ ಪ್ರೆöÊ ಲಿ ಕಂಪನಿಯ ಟೆಂಡರ್ ತಮ್ಮ ಹೆಸರಿಗೆ ಆದ ಬಗ್ಗೆ ಅವರು ತಿಳಿಸಿದರು. ಇದಕ್ಕಾಗಿ ಕೆಲ ದಾಖಲೆಗಳನ್ನು ತೋರಿಸಿದರು.
`ಕೆಲ ದಿನದಲ್ಲಿ ಪ್ರೊಜೆಕ್ಟ ಶುರು ಆಗುತ್ತದೆ. ಆ ವೇಳೆ ಮೂರು ಪಟ್ಟು ಹೆಚ್ಚಿನ ಲಾಭ ಸಿಗುತ್ತದೆ’ ಎಂದು ಮಹಮದ್ ಶಬೀ ಅವರನ್ನು ಆಸಿಪ್ ಇಕ್ಬಾಲ್ ಅವರು ನಂಬಿಸಿದರು. ತುರ್ತಾಗಿ 25 ಲಕ್ಷ ರೂಪಡೆಯಬೇಕು ಎಂದು ನಂಬಿಸಿ ಆ ಅವಧಿಯಲ್ಲಿ 5 ಲಕ್ಷ ರೂ ಹಣಪಡೆದರು. ಅದಾದ ನಂತರ ಮತ್ತೆ ರೈಲು ನಿಲ್ದಾಣಕ್ಕೆ ಬರುವಂತೆ ಕೋರಿ ಅಲ್ಲಿ 13 ಲಕ್ಷ ರೂ ಹಣಪಡೆದರು.
ಅದಾದ ನಂತರ ಮೊಬೈಲ್ ಮೂಲಕ ಇನ್ನಷ್ಟು ಹಣ ವರ್ಗಾಯಿಸಿಕೊಂಡರು. ಕೊನೆಗೆ ಆ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದರು. ಇದರಿಂದ ಸಿಟ್ಟಾದ ಮಹಮದ್ ಶಬೀ ಅವರು ಇದೀಗ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.