ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರ ನಡುವೆ ವೈಮನಸ್ಸು ಮೂಡಿದ್ದು, ಇದೇ ವಿಷಯವಾಗಿ ರೈತರು ಗುರುವಾರ ಪ್ರತಿಭಟನೆ ಮಾಡಿದ್ದಾರೆ.
ರೈತರ ಜೊತೆ ಸಭೆ ನಡೆಸದೇ ಕಾರ್ಖಾನೆ ಶುರು ಮಾಡುವ ನಿರ್ಧಾರ, ದರ ನಿಗದಿ ಬಗ್ಗೆ ಚರ್ಚೆ ನಡೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಬ್ಬು ಸಾಗಾಣಿಕಾ ದರವನ್ನು ಹೆಚ್ಚಿಸಿ ಕಬ್ಬಿನ ದರ ಪ್ರತಿ ಟನ್’ಗೆ 3050ರೂ ಘೋಷಿಸಿರುವುದಕ್ಕೆ ರೈತರು ಅಸಮಧಾನವ್ಯಕ್ತಪಡಿಸಿದ್ದಾರೆ.
ಗುರುವಾರದಿಂದ ಹಳಿಯಾಳ ಆಡಳಿತ ಸೌಧದ ಎದುರು ಕಬ್ಬು ಬೆಳೆಗಾರರು ಧರಣಿ ನಡೆಸಿದರು. ಕಳೆದ ಸಾಲಿನ 256 ರೂ ಹೆಚ್ಚುವರಿ ಕಡಿತ ಮೊತ್ತವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಬೇಸರಿಸಿದರು.
ಸಂಜೆಯವರೆಗೂ ಪ್ರತಿಭಟನೆ ನಡೆದಿದ್ದು, ತಹಶೀಲ್ದಾರರ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆಯವರು ಮಾತುಕಥೆಗೆ ಬಂದರೂ ರೈತರು ಅದಕ್ಕೆ ಒಪ್ಪಲಿಲ್ಲ. ಜಿಲ್ಲಾಧಿಕಾರಿಗಳು ಜಾಗಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.