`ನಕಲಿ ದಾಖಲೆ ನೀಡಿ ಹಿಂದು ಯುವತಿ ವಿವಾಹವಾದ ಯೂಟೂಬರ್ ಮುಕಳೆಪ್ಪ ಅವರಿಗೆ ಸಚಿವ ಜಮೀರ್ ಅಹ್ಮದ್ ಬೆನ್ನೆಲುಬಾಗಿದ್ದಾರೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. `ತಾಯಿ ದೂರು ನೀಡಿದರೂ ಕ್ರಮವಾಗದ ಹಿಂದೆ ಪೊಲೀಸರಿಗೆ ಬಂದ ಒತ್ತಡವೇ ಕಾರಣ’ ಎಂದವರು ವಿವರಿಸಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು `ಮುಕಳೆಪ್ಪಾ ಅವರಿಗೆ ಸಚಿವ ಜಮೀರ್ ಅಹ್ಮದ್ ರಕ್ಷಣೆಯಿದೆ. ಹೀಗಾಗಿಯೇ ಹಿಂದು ಸಮುದಾಯದವರ ಪ್ರತಿಭಟನೆಗೆ ಯಾರೂ ಬೆಲೆ ಕೊಡುತ್ತಿಲ್ಲ. `ಯೂಟೂಬರ್ ಕ್ವಾಜಾ ಎನ್ನುವ ವ್ಯಕ್ತಿ ಸುಳ್ಳು ಅಪಡಾವಿಟ್ ಸಲ್ಲಿಸಿದ್ದಾರೆ. ದಾಖಲೆಗಳು ನಕಲಿಯಾಗಿದೆ’ ಎಂದವರು ವಿವರಿಸಿದ್ದಾರೆ. `ಕ್ವಾಜಾ ಕಲ್ಯಾಣ ಮಂಟಪದಲ್ಲಿ ಮದುವೆ ಆಗಿರುವುದಾಗಿಯೂ ದಾಖಲೆ ನೀಡಿದ್ದು, ಅಲ್ಲಿ ಹೋಗಿ ವಿಚಾರಿಸಿದಾಗ `ಆ ದಿನಾಂಕದAದು ಯಾವುದೇ ಮದುವೆ ನಡೆದಿಲ್ಲ’ ಎಂದು ಮಂಟಪದವರು ಪತ್ರ ಕೊಟ್ಟಿದ್ದಾರೆ. `ಆತ ನೀಡಿದ ವಿಳಾಸ ಸರಕಾರಿ ಕೊಳಗೇರಿ ಮನೆ ಆಗಿದ್ದು, ಅದನ್ನು ಬಾಡಿಗೆ ನೀಡಲು ಬರುವುದಿಲ್ಲ. ಅದನ್ನು ಮಾರಾಟ ಮಾಡುವ ಹಾಗಿಲ್ಲ. ಹೀಗಾಗಿ ನಕಲಿ ದಾಖಲೆಗಳು ಸ್ಪಷ್ಠವಾಗಿದೆ’ ಎಂದವರು ತಿಳಿಸಿದರು.
`ಆತನ ನಕಲಿ ದಾಖಲೆ ಬಗ್ಗೆ ಸಾಕಷ್ಟು ಪುರಾವೆ ಇದ್ದರೂ ಪೊಲೀಸ್ ಇಲಾಖೆ ಏನೂ ಮಾಡಿಲ್ಲ. ಮುಂಡಗೋಡ ನೊಂದಣಿ ಕಚೇರಿಯಲ್ಲಿ ಭ್ರಷ್ಟರೇ ತುಂಬಿದ್ದಾರೆ’ ಎಂದು ದೂರಿದರು. `ಮುಂಡಗೋಡದಲ್ಲಿ ಅಧಿಕಾರಿಯೊಬ್ಬ 3 ಕೋಟಿ ರೂ ಮನೆ ಕಟ್ಟಿದ್ದು, ಆ ಹಣದ ಬಗ್ಗೆ ತನಿಖೆ ನಡೆಯಬೇಕು. ಆ ಅಧಿಕಾರಿ ಒಬ್ಬ ವ್ಯಕ್ತಿ ಮೃತನಾಗಿದ್ದಾಗ ಆ ಶವವನ್ನು ಸ್ಮಶಾನಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮೃತನ ಹೆಬ್ಬೆರಳಿನ ಸಹಿ ಪಡೆದು ಅವನ ದಾಖಲೆಗಳನ್ನು ನಿರ್ಮಾಣ ಮಾಡಿದ ಉದಾಹರಣೆಗಳಿವೆ’ ಎಂದು ವಿವರಿಸಿದರು.