18 ಗ್ರಾಮದ ಅಧಿದೇವರಾಗಿರುವ ಕಾರವಾರ ಬಾಡದ ಶ್ರೀ ಮಹಾದೇವ ವಿನಾಯಕ ದೇವಸ್ಥಾನದಲ್ಲಿ ನವಂಬರ್ 5 ಹಾಗೂ 6 ರಂದು ದೇವರ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವಂಬರ್ 5 ರಂದು ಬೆಳಗ್ಗೆ ಅರ್ಚಕರಿಂದ ಅಭಿಷೇಕ, ಅದಾದ ನಂತರ ತುಲಾಭಾರ, 12.30ಕ್ಕೆ ಪೂಜೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ದೇವರ ಪಲ್ಲಕ್ಕಿಯೂ ಹಬ್ಬುವಾಡ ಗಣಪತಿ ದೇವಸ್ಥಾನದ ವನಭೋಜನಕ್ಕೆ ತೆರಳಲಿದೆ. ದೇವರ ಸಾನಿಧ್ಯದಲ್ಲಿ ಪೂಜಾ ಕಾರ್ಯ ಮುಗಿದ ನಂತರ ಸಂಜೆ 6 ಕ್ಕೆ ವನಭೋಜನ ಶುರುವಾಗಲಿದೆ. ಅದಾದ ಪರಂಪರೆಯAತೆ ಶ್ರೀ ದೇವರ ಪಲ್ಲಕ್ಕಿಯು ಐದು ದೇವರ ಕಟ್ಟೆ ತಿರುಗುವುದು. ಆ ನಂತರ ಮಹಾಪೂಜೆ ನಡೆಯಲಿದೆ.
ಆ ದಿನ ರಾತ್ರಿ 9 ಗಂಟೆಗೆ ಗಣಪತಿ ದೇವಸ್ಥಾನದಿಂದ ಕಾರವಾರ ಮಾರ್ಗವಾಗಿ ಭಕ್ತರ ಆರತಿ ಸ್ವೀಕರಿಸುತ್ತ ಮಹಾದೇವಸ್ಥಾನಕ್ಕೆ ಮೆರವಣಿಗೆ ಬರಲಿದ್ದು, ಅಲ್ಲಿ ದೇವರ ಪಾರಂಪರಿಕ ಪೂಜಾ ವಿಧಾನ ದೇವರು ತೊಟ್ಟಿಲಿನಲ್ಲಿ ವಿರಾಜಿಸುವ ಕಾರ್ಯಕ್ರಮ ಜರುಗಲಿದೆ. ನವೆಂಬರ್ 6 ರ ಗುರುವಾರ ಮಧ್ಯಾಹ್ನ 3 ಗಂಟೆಯಿAದ ಕೋಡಿಭಾಗದ ಭಕ್ತವೃಂದದಿAದ ಕೋಲಾಟ, ದೆವಳಿ ಸಮುದಾಯದವರಿಂದ ನರ್ತನವನ್ನು ಆಯೋಜಿಸಲಾಗಿದೆ.
ಅದಾದ ನಂತರ ದಹಿಕಾಲ ಉತ್ಸವ ನಡೆಯಲಿದೆ. ದೇವರು ಅವಬೃತಸ್ನಾನಕ್ಕೆ ಕೋಡಿಭಾಗದ ಕಾಳಿ ನದಿ ಸನ್ನಿಧಿಗೆ ತೆರಳಿ ನಂತರ ರಾತ್ರಿ ದೇವಾಲಯಕ್ಕೆ ಹಿಂತಿರುಗಿ ಅಷ್ಟಾವಧಾನ ಪೂಜಾ ವಿಧಾನ ನೆರವೇರಿಸಲು ಉದ್ದೇಶಿಸಲಾಗಿದೆ. ಅದಾದ ನಂತರ ಸವಾಲು, ಸವಾಲು ಮುಗಿದ ಮೇಲೆ ಬಾಡದ ಮಹಾದೇವ ನಾಟ್ಯ ಮಂಡಳಿಯವತಿಯುAದ ರಾತ್ರಿ 10.30 ಗಂಟೆಗೆ `ಮಗ ತಂದ ಮಾಂಗಲ್ಯ’ ಎಂಬ ನಾಟಕ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು ಎಂದು ಅಧ್ಯಕ್ಷರು ಅರವಿಂದ ಗುನಗಿ ಶ್ರೀ ಮಹಾದೇವ ವಿನಾಯಕ ವ್ಯವಸ್ಥಾಪನಾ ಸಮಿತಿ ಬಾಡ ಕಾರವಾರ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.