ಯಲ್ಲಾಪುರದಲ್ಲಿ 39ನೇ ವರ್ಷದ ಸಂಕಲ್ಪ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಸಾಂಸ್ಕೃತಿಕ ಸುಗ್ಗಿ ಶುರುವಾಗಿದೆ. ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ಹಾಗೂ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಗಳು ಮೊದಲ ದಿನದ ಉತ್ಸವದಲ್ಲಿ ಭಾಗವಹಿಸಿದ್ದಾರೆ.
ಪಟ್ಟಣದ ಗಾಂಧಿ ಕುಟೀರದಲ್ಲಿ ಶುಕ್ರವಾರ ಸಂಕಲ್ಪ ಉತ್ಸವ ಉದ್ಘಾಟಿಸಿದ ಸ್ವರ್ಣವಲ್ಲಿ ಶ್ರೀಗಳು `ಉತ್ತರ ಕನ್ನಡ ಜಿಲ್ಲೆಯ ರೈತರ ಭೂಮಿಗಳು ವಿದೇಶಿ ವ್ಯಕ್ತಿಗಳ ಪಾಲಾಗುತ್ತಿದೆ. ಹೀಗೆ ಮುಂದುವರೆದರೆ ಅಪಾಯ ಖಚಿತ’ ಎಂದು ಆತಂಕವ್ಯಕ್ತಪಡಿಸಿದರು. `ನಮ್ಮ ಸಂಸ್ಕೃತಿ ಮತ್ತು ಶ್ರೇಷ್ಠ ಪರಂಪರೆಯನ್ನು ಮಕ್ಕಳಿಗೆ ಹಸ್ತಾಂತರಿಸುವಲ್ಲಿ ಪಾಲಕರು ಹಿಂದೆ ಬೀಳುತ್ತಿದ್ದಾರೆ. ಇದು ವೈವಾಹಿಕ ಮತ್ತು ಕೃಷಿಯಲ್ಲಿ ತೊಂದರೆ ಉಂಟಾಗಲು ಕಾರಣವಾಗಿದೆ’ ಎಂದವರು ಹೇಳಿದರು.
`ಸ್ವರ್ಣವಲ್ಲೀ ಮಠ ಯಕ್ಷಗಾನದ ಉತ್ತರಧ್ರುವ. ಎಡನೀರು ಮಠ ದಕ್ಷಿಣಧ್ರುವ ಈ ಎರಡೂ ಮಠಗಳು ಕೂಡಿದರೆ ಯಕ್ಷಗಾನಕ್ಕೆ ದೊಡ್ಡ ಶಕ್ತಿ ಲಭಿಸಲಿದೆ’ ಎಂದು ಬಣ್ಣಿಸಿದರು. ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀವ9ಚನ ನೀಡಿ `ಯಕ್ಷಗಾನ, ವೇದಗಳು ನಮಗೆ ಸಂಸ್ಕೃತಿಯನ್ನು ಪರಿಚಯಿಸಿವೆ. ಕಲೆಗಳಿದ್ದಲ್ಲಿ ಸ್ವಾಸ್ತವಾದ ಜೀವನ ಸಾಧ್ಯ’ ಎಂದರು. `ನಮ್ಮ ಧರ್ಮ, ಸಂಸ್ಕೃತಿಯ ಕುರಿತಾದ ವಿಷಯ ಪುಸ್ತಕದಲ್ಲಿ ಇಲ್ಲ. ಭಗವದ್ಗೀತೆಯ ಸಂದೇಶಗಳನ್ನು ಪಠ್ಯದಲ್ಲಿ ಸೇರಿಸಲು ಅನೇಕರು ವಿರೋಧಿಸುತ್ತಿದ್ದು, ಅದು ಸರಿಯಲ್ಲ’ ಎಂದರು.
ಉದ್ಯಮಿ ರಾಮನಾಥ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವನರಾಗ ಶರ್ಮಾ, ಎಂ ಆರ್ ಹೆಗಡೆ, ಬೀರಣ್ಣ ನಾಯಕ ಮೊಗಟಾ, ವೆಂಕಟೇಶ ಹೆಗಡೆ ಹೊಸಬಾಳೆ, ಮುರಳಿ ಹೆಗಡೆ, ಶಂಕರ ಭಟ್ ಇದ್ದರು. ಪದ್ಮಾ ಪ್ರಮೋದ ಹೆಗಡೆ, ಪ್ರಸಾದ ಹೆಗಡೆ, ಸಿ ಜಿ ಹೆಗಡೆ, ಚಂದ್ರಕಲಾ ಭಟ್ಟ ವಿವಿಧ ಜವಾಬ್ದಾರಿ ನಿಭಾಯಿಸಿದರು.