ಅಭಿವೃದ್ಧಿ ವಿಷಯದಲ್ಲಿ ಶಿರಸಿ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ, ಇಲ್ಲಿನ ರಸ್ತೆಯಲ್ಲಿರುವ ಸಹಸ್ರ ಹೊಂಡಕ್ಕೆ ಮಾತ್ರ ಈವರೆಗೂ ಮುಕ್ತಿ ಸಿಕ್ಕಿಲ್ಲ!
ಶಿರಸಿಯ ಯಾವ ದಿಕ್ಕಿಗೆ ಸಂಚರಿಸಿದರೂ ವಾಹನಗಳು ರಸ್ತೆ ಗುಂಡಿಗೆ ಬೀಳುತ್ತಿವೆ. ಇದರೊಂದಿಗೆ ಅಪಾರ ಪ್ರಮಾಣದ ಧೂಳು ಸಹ ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಅಕ್ಟೊಬರ್ ಅಂತ್ಯದ ಅವಧಿಯಲ್ಲಿಯೂ ಶಿರಸಿಯಲ್ಲಿ ಮಳೆಯಗುತ್ತಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿದೆ. ಪರಿಣಾಮ ಗುಂಡಿAiÀ ಆಳ-ಅಗಲ ಗೊತ್ತಾಗದೇ ವಾಹನಗಳು ಹೊಂಡಕ್ಕೆ ಹಾರುತ್ತಿವೆ.
ಯಾವ ಜನಪ್ರತಿನಿಧಿಗಳು ಶಿರಸಿ ರಸ್ತೆಯ ಹೊಂಡ ಮುಚ್ಚುವ ಸಾಹಸಕ್ಕೆ ಕೈ ಹಾಕಿಲ್ಲ. ಶಿರಸಿಯ ನಿಲೇಕಣಿ ಭಾಗದ ರಸ್ತೆ ಅಭಿವೃದ್ಧಿ ಗುತ್ತಿಗೆಪಡೆದ ಆರ್‌ಎನ್‌ಎಸ್ ಕಂಪನಿಯವರು ಸಹ ಗುಂಡಿ ಬಿದ್ದ ರಸ್ತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಹೀಗಾಗಿ ನಾಯಕರು ಜನರಿಂದ ಬೈಸಿಕೊಳ್ಳುವ ಕೆಲಸ ಕೊನೆಯಾಗಿಲ್ಲ. ಶಿರಸಿ ಕುಮಟಾ ರಸ್ತೆಯ ನೀಲೇಕಣಿ ಬಳಿ ಸಹಸ್ರ ಹೊಂಡಗಳಿದ್ದು, ಅವರು ಇದೀಗ ಸಾವಿರ ಕೆರೆಗಳಂತೆ ಭಾಸವಾಗುತ್ತಿದೆ. ಒಮ್ಮೆ ಹೊಂಡ ಮುಚ್ಚುವ ಕೆಲಸ ನಡೆದಿದ್ದರು, ಆಗ ತೇಪೆ ಹಚ್ಚಲು ಹಾಕಿದ ಸಿಮೆಂಟು ಮತ್ತೆ ಕೊಚ್ಚಿ ಹೋಗಿದೆ.
ರಸ್ತೆ ಒಂದು ಭಾಗದಲ್ಲಿ ಸಿಮೆಂಟ್ ತುಂಬಿದ್ದರೂ ಆ ಭಾಗದಲ್ಲಿ ಜನರ ಓಡಾಟಕ್ಕೆ ಅವಕಾಶವಿಲ್ಲ. ಇನ್ನೊಂದು ಭಾಗ ಇಕ್ಕಟ್ಟಾಗಿದ್ದು, ಅಲ್ಲಿನ ಗುಂಡಿ ತಪ್ಪಿಸಿ ಸಾಗಲು ವಾಹನ ಸವಾರರಿಂದ ಸಾಧ್ಯವಾಗುತ್ತಿಲ್ಲ. ದೊಡ್ಡ ದೊಡ್ಡ ವಾಹನಗಳ ಜೊತೆ ಬೈಕ್ ಸವಾರರು ಸಹ ಈ ಮಾರ್ಗದಲ್ಲಿ ಓಡಾಡಲು ಹೆದರುತ್ತಿದ್ದಾರೆ.