ಕಾರವಾರದ ಕೆಸರು ಗದ್ದೆಯಲ್ಲಿ ಮಾಜಿ ಸೈನಿಕರೊಬ್ಬರ ಶವ ಸಿಕ್ಕಿದೆ. ಅಮದಳ್ಳಿಯ ಬಳಿ ಶವ ನೋಡಿದ ಜನ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿದ್ದಾರೆ.
Advertisement. Scroll to continue reading.
ಶುಕ್ರವಾರ ಮಧ್ಯಾಹ್ನ ಅಮದಳ್ಳಿ ಗ್ರಾಮದಲ್ಲಿ ಅದೇ ಊರಿನ ಮಾಜಿ ಸೈನಿಕ ರವಿ ಗಾಂವಕರ (44) ಅವರು ಸಾವನಪ್ಪಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಶವ ಸಿಕ್ಕ ಜಾಗ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದು, ಮಾಜಿ ಸೈನಿಕನ ಸಾವಿನ ಬಗ್ಗೆ ಚರ್ಚೆ ನಡೆದಿದೆ.
ಕೆಸರು ಗದ್ದೆಯ ರಾಡಿಯಲ್ಲಿ ರವಿ ಗಾಂವಕರ ಅವರ ಶವ ಸಿಕ್ಕಿದ್ದು, ಸದ್ಯ ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಯ ವಿಧಿ-ವಿಧಾನಗಳು ನಡೆಯುತ್ತಿದೆ. ಎರಡು ದಿನದ ಹಿಂದೆಯೇ ರವಿ ಗಾಂವಕರ ಅವರು ಸಾವನಪ್ಪಿದ ಅನುಮಾನಗಳಿವೆ. ರವಿ ಗಾಂವಕರ ಅವರ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.