ಅಂಕೋಲಾದ ಪೂಜಗೇರಿ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ ಅವರ ಕಾಮ ಪುರಾಣದ ಕಥೆ ಕೇಳುವುದಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ಆಸಕ್ತಿವಹಿಸಿದೆ. ಉಪನ್ಯಾಸಕನ ಕಿತಾಪತಿಯ ಬಗ್ಗೆ ಅಧ್ಯಯನ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ ಮತ್ತು ನಿರ್ದೇಶಕ ಲಕ್ಷ್ಮೀಪತಿ ಅವರು ಗುರುವಾರ ಕಾಲೇಜಿಗೆ ಭೇಟಿ ನೀಡಿದ್ದಾರೆ.
ಈ ವೇಳೆ ಅವರಿಬ್ಬರು ಆಡಳಿತ ಮಂಡಳಿ, ದೂರುದಾರ ವಿದ್ಯಾರ್ಥಿನಿ, ಪಾಲಕರು, ಪತ್ರಕರ್ತರು, ಉಪನ್ಯಾಸಕರು, ವಿದ್ಯಾರ್ಥಿಗಳ ಹೇಳಿಕೆಪಡೆದರು. ಸಾರ್ವಜನಿಕರ ಜೊತೆ ಚರ್ಚಿಸಿ ಘಟನಾವಳಿಗಳ ಬಗ್ಗೆ ಅವಲೋಕಿಸಿದರು. `ದೂರಿನ ಆಧಾರದಲ್ಲಿ ಭೇಟಿ ನೀಡಿದ್ದು, ಇಂತ ತಪ್ಪು ಸಹಿಸುವುದಿಲ್ಲ. ನಿಯಮಾನುಸಾರ ಸೂಕ್ತ ಕ್ರಮ ಖಚಿತ’ ಎಂದವರು ಭರವಸೆ ನೀಡಿದರು. `ತಹಶೀಲ್ದಾರರಿಂದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳವರೆಗೆ ಪ್ರತಿಯೊಬ್ಬರಿಂದಲೂ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಥಮ ಮಾಹಿತಿಯನ್ನು ಕಲೆಹಾಕಿ ಅದರ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ’ ಎಂದು ಜಂಟಿ ನಿರ್ದೇಶಕರಾದ ಕರಿಮುನ್ನಿಸಾ ಸೈಯದ ವಿವರಿಸಿದರು.
`ಶಾಸಕ ಸತೀಶ್ ಸೈಲ್ ಅವರ ನಿರ್ದೇಶನದಂತೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ಮುಖ್ಯವಾಗಿದ್ದು, ಸಾರ್ವಜನಿಕರ ವಿನಂತಿಯAತೆ ಉಪನ್ಯಾಸಕರನ್ನು ಅಮಾನತ್ತು ಮಾಡಬೇಕು. ಪ್ರಾಚಾರ್ಯರನ್ನು ವÀರ್ಗಾಯಿಸಬೇಕು’ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯಕ ಆಗ್ರಹಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಾಬಲೇಶ್ವರ ನಾಯ್ಕ, ಮದುಕೇಶ್ವರ ದೇವರಬಾವಿ, ಪ್ರಮುಖರಾದ ವಿಠಲ ಶೆಟ್ಟಿ, ಪ್ರಮೋದ ಬಾನಾವಳಿಕರ, ಜಗದೀಶ ಖಾರ್ವಿ, ಸುಂದರ ಖಾರ್ವಿ, ಸಚಿನ ಅನ್ನೋಟಿಕರ, ಗುರುದಾಸ ಬಾನಾವಳಿಕರ, ದ್ರುವ, ಸೂರಜ, ಜೈರಾಮ ಇದ್ದರು.