ಎರಡು ತಿಂಗಳ ಹಿಂದೆ ಸ್ಕೂಟಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಭಟ್ಕಳದ ಲಕ್ಷ್ಮೀನಾಯ್ಕ ಅವರು ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.
ಭಟ್ಕಳ ಪುರವರ್ಗದ ದಾಸಿಮನೆಯಲ್ಲಿ ಲಕ್ಷ್ಮೀ ನಾಯ್ಕ (67) ಅವರು ವಾಸವಾಗಿದ್ದರು. ಗ್ರಾಮ ಪಂಚಾಯತದಲ್ಲಿ ಕೆಲಸ ಮಾಡುವ ಮಗ ಉಮೇಶ ವೆಂಕಟಯ್ಯ ನಾಯ್ಕ (33) ಅವರ ಜೊತೆ 2025ರ ಅಗಸ್ಟ 8ರಂದು ತ್ರಿಚಕ್ರದ ಸ್ಕೂಟರಿನಲ್ಲಿ ಅವರು ಹೋಗುತ್ತಿದ್ದರು. ಬೆಣ್ಣಂದೂರು ಗ್ರಾಮದ ಬೆಣಂದೂರು ರಸ್ತೆ-ಮಾಸ್ತಿಮನೆ ಎದುರು ಸ್ಕೂಟಿರಿನ ವೇಗ ಜಾಸ್ತಿಯಾಗಿದ್ದು, ಸ್ಕೂಟರ್ ಪಲ್ಟಿಯಾಯಿತು.
ಪರಿಣಾಮ ನೆಲಕ್ಕೆ ಬಿದ್ದ ಲಕ್ಷ್ಮೀ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಅಕ್ಟೊಬರ್ 20ರಂದು ಅವರು ಸಾವನಪ್ಪಿದರು. ಯಲ್ವಡಕವೂರಿನ ಸರ್ಪಕಟ್ಟಾ ಬಳಿಯ ಕ್ಯಾಂಟಿನ್ ಕೆಲಸಗಾರ ಗೋಪಾಲ ನಾರಾಯಣ ನಾಯ್ಕ ಅವರು ಈ ವಿಷಯದ ಬಗ್ಗೆ ಭಟ್ಕಳ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.