ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಕುಮಟಾ ಕೋರ್ಟ ಸಿಬ್ಬಂದಿ ಸವಿತಾ ಭಟ್ಟ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಕಪಾಟು ಶೋಧಿಸಿದ ಅವರು ಅಲ್ಲಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ.
ಸವಿತಾ ನಾರಾಯಣ ಭಟ್ಟ ಅವರು ಕುಮಟಾದ ಕೋಡ್ಕಣಿಯಲ್ಲಿ ವಾಸವಾಗಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಅವರು ಶೀಘ್ರ ಲಿಫಿ ಬರಹಗಾರರಾಗಿದ್ದಾರೆ. ತಮ್ಮ ಉಳಿತಾಯದ ಹಣದಿಂದ ಅವರು ಚಿನ್ನಾಭರಣ ಮಾಡಿಸಿದ್ದು, ಆ ಆಭರಣಗಳು ಇದೀಗ ಕಳ್ಳರ ಪಾಲಾಗಿದೆ.
ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಬೆಡ್ ರೂಂ ಪ್ರವೇಶಿಸಿದ್ದಾರೆ. ಅಲ್ಲಿದ್ದ 5 ಸಾವಿರ ರೂ ಹಣವನ್ನು ಜೇಬಿಗಿಳಿಸಿದ್ದಾರೆ. ಅದಾದ ನಂತರ 1.33 ಲಕ್ಷ ರೂ ಮೌಲ್ಯದ ಚಿನ್ನದ ನೆಕ್ಲೇಸ್ ಕದ್ದಿದ್ದಾರೆ. 9 ಸಾವಿರ ರೂ ಮೌಲ್ಯದ ಉಂಗುರ, 1.30 ಲಕ್ಷ ರೂ ಮೌಲ್ಯದ ಬಳೆ, 25 ಸಾವಿರ ರೂ ಮೌಲ್ಯದ ಕಿವಿಯೋಲೆ, 5 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣಗಳನ್ನು ಅಪಹರಿಸಿದ್ದಾರೆ.
ನವೆಂಬರ್ 17ರ ರಾತ್ರಿ ಈ ಕಳ್ಳತನ ನಡೆದಿದೆ. ನವೆಂಬರ್ 18ರಂದು ಕಳ್ಳತನ ನಡೆದಿರುವುದು ಕುಟುಂಬದವರಿಗೆ ಗೊತ್ತಾಗಿದೆ. ಅದಾದ ನಂತರ ಸವಿತಾ ಭಟ್ಟ ಅವರು ಕುಮಟಾ ಪೊಲೀಸ್ ಠಾಣೆಗೆ ತೆರಳಿ ಕಳ್ಳತನದ ವಿಷಯ ಹೇಳಿದ್ದಾರೆ. ಪಿಎಸ್‌ಐ ಸಾವಿತ್ರಿ ನಾಯಕ ಅವರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.
`ಮನೆ ಬಿಟ್ಟು ಹೋಗುವ ಮುನ್ನ ಪೊಲೀಸರಿಗೆ ತಿಳಿಸಿ’

This will close in 6 seconds
You cannot copy content of this page