ಮಕ್ಕಳ ಜೊತೆ ಆಸ್ಪತ್ರೆಗೆ ಹೊರಟಿದ್ದ ಮಹಿಳೆಯೊಬ್ಬರು ಮೂರು ದಿನ ಕಳೆದರೂ ಮನೆಗೆ ಮರಳಿಲ್ಲ. ಪತ್ನಿ ಜೊತೆ ಮಕ್ಕಳು ಕಾಣದ ಕಾರಣ ಯಲ್ಲಾಪುರದ ಮುಬಾರಕ ಅವರು ಕಂಗಾಲಾಗಿದ್ದಾರೆ.
Advertisement. Scroll to continue reading.
ಮುಬಾರಕ್ ಸೌದಸಾಗರ (30) ಅವರು ಯಲ್ಲಾಪುರ ಕಿರವತ್ತಿ ಮೂಲದವರು. ಅವರು ಯಲ್ಲಾಪುರದಲ್ಲಿ ಸೆಂಟ್ರಿAಗ್ ಕೆಲಸ ಮಾಡಿಕೊಂಡಿದ್ದಾರೆ. ಮುಬಾರಕ್ ಅವರ ಪತ್ನಿ ಸಾನಾ (27) ಹಾಗೂ ಆರು ವರ್ಷದ ಮಗಳು ಸಾಮಿಯಾ ಜೊತೆ ಮೂರು ವರ್ಷದ ಸಾಫಿಯಾ ಅವರು ಕಾಣೆಯಾಗಿದ್ದಾರೆ.
ನವೆಂಬರ್ 25ರಂದು ಸಾನಾ ಅವರು ತಮ್ಮ ಮನೆಯಿಂದ ಸರ್ಕಾರಿ ಆಸ್ಪತ್ರೆಗೆ ಹೊರಟಿದ್ದರು. ಅವರ ಇಬ್ಬರು ಮಕ್ಕಳು ಜೊತೆಯಲ್ಲಿದ್ದರು. ಮನೆಯಲ್ಲಿ ಸಹ `ಆಸ್ಪತ್ರೆಗೆ ಹೋಗಿ ಬರುವೆ’ ಎಂದಿದ್ದರು. ಆದರೆ, ಅವರು ಎಲ್ಲಿ ಹೋದರು? ಏನಾದರು? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿಲ್ಲ. ಸಂಬAಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದರೂ ಆ ಮೂವರ ಸುಳಿವು ದೊರೆತಿಲ್ಲ.
ಈ ಎಲ್ಲಾ ಹಿನ್ನಲೆ ಸಾನಾ ಅವರ ಪತಿ ಮುಬಾರಕ್ ಸೌದಸಾಗರ ಅವರು ಪತ್ನಿ-ಮಕ್ಕಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಗೂ ಆಗಮಿಸಿದ ಅವರು ಕಾಣೆಯಾದವರ ಪತ್ತೆಗೆ ಮನವಿ ಮಾಡಿದ್ದಾರೆ.