ಕಾರವಾರದ ಜಯ ಕರ್ನಾಟಕ ಜನಪರ ವೇದಿಕೆ ರಚನೆಯಾಗಿ ಐದು ವರ್ಷವಾಗಿದ್ದು, ಈ ಹಿನ್ನಲೆ ನಗರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಿದೆ.
70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಸ್ ನಿಲ್ದಾಣದ ಎದುರುಗಡೆ ನಡೆಯಿತು. ಕಾರವಾರ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ ಧ್ವಜಹೊರಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು `ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲೆಯ ಸಮಸ್ಯೆಗಳ ಧ್ವನಿಯಾಗಿದೆ. ಈ ಹಿಂದಿನಿAದ ಜಿಲ್ಲೆಯಲ್ಲಿ ಕನ್ನಡ ಉಳಿವಿಗಾಗಿ, ಜಿಲ್ಲೆಯ ಜನರ ಸಮಸ್ಯೆಗಳ ಪರ ಧ್ವನಿ ಎತ್ತುತ್ತಿದೆ’ ಎಂದರು.
ಸAಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಮಾತನಾಡಿ `ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಅವರ ಮುಖ್ಯ ಉದ್ದೇಶ ನಾಡು, ನುಡಿ, ನೆಲ ಹಾಗೂ ಜಲ. ಇದರೊಟ್ಟಿಗೆ ಪರಿಸರ ಸಂರಕ್ಷಣೆ, ಗಿಡ ಬೆಳೆಸುವುದಾಗಿದೆ. ಈ ಹಿನ್ನಲೆ ಸಂಘಟನೆ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುತ್ತಾ ಬಂದಿದೆ’ ಎಂದು ವಿವರಿಸಿದರು.
ಈ ವೇಳೆ ಸಂಘಟನೆ ಜಿಲ್ಲಾ ಕಾರ್ಯಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ್. ಜಿಲ್ಲಾ ಯುವ ಘಟಕದ ಕಾರ್ಯಧ್ಯಕ್ಷ ರಾಹುಲ್ ತಾಂಡೇಲ್, ಜಿಲ್ಲಾ ಉಪಾಧ್ಯಕ್ಷ ಸುನಿಲ್ ತಾಂಡೇಲ್, ಜಿಲ್ಲಾ ಕಾರ್ಯದರ್ಶಿ ರಾಜು ತಾಂಡೇಲ್, ಕಾರವಾರ ತಾಲೂಕ ಅಧ್ಯಕ್ಷ ಮೋಹನ್ ಉಳ್ಳೇಕರ್, ದಿಲೀಪ್ ನಾಗೇಕರ್. ಸಂದೇಶ ಆಚಾರಿ, ವಿನಾಯಕ್ ಹರಿಕಂತ್ರ, ದೀಪಕ್ ತಾಂಡೇಲ್, ವಿನಯ್ ನಾಯ್ಕ್, ದಿಲೀಪ್ ಉಳೇಕರ್, ಸಂಘಟನೆ ಪ್ರಮುಖರು ಹಾಗೂ ಬಸ್ ಚಾಲಕರು ಉಪಸ್ಥಿತರಿದ್ದರು.