ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಉತ್ತರ ಕನ್ನಡ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿ ಕಾರ್ಯ ನಿರ್ವಹಿಸಲು ಯೋಗ್ಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಖಾಲಿ ಹುದ್ದೆ ಭರ್ತಿ ಮಾಡುವುದಕ್ಕಾಗಿ ಸದ್ಯ ಅರ್ಜಿ ಆಹ್ವಾನಿಸಲಾಗಿದೆ.
ಕಾರವಾರ ತಾಲೂಕಿನ ಕೆರವಡಿ, ಕಾರವಾರ ನಗರಸಭೆ, ಹೊನ್ನಾವರ ತಾಲೂಕಿನ ಹೊಸಕುಳಿ, ಭಟ್ಕಳ ತಾಲೂಕಿನ ಬೆಳಕೆ, ಶಿರಸಿ ತಾಲೂಕಿನ ಇಟಗುಳಿ ಮತ್ತು ಹುತ್ಗಾರದಲ್ಲಿ ಉದ್ಯೋಗ ಅವಕಾಶಗಳಿವೆ. ಸಿದ್ದಾಪುರ ತಾಲೂಕಿನ ಬಿಳಗಿ ಮತ್ತು ಹೆಗ್ಗರಣೆ, ಹಳಿಯಾಳ ಪುರಸಭೆ, ಜೋಯಿಡಾ ತಾಲೂಕಿನ ಅಖೇತಿ ಹಾಗೂ ಆವೇಡಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಹುಡುಕಾಟ ನಡೆದಿದೆ.
ಶೇ 40ರಷ್ಟು ವಿಕಲಚೇತನರಾಗಿರುವವರಿಗೆ ಈ ಉದ್ಯೋಗದಲ್ಲಿ ಮೊದಲ ಆದ್ಯತೆ ಕೊಡಲಾಗುತ್ತದೆ. ಭಾಗಶಃ ಅಂಧರು ಹಾಗೂ ಶ್ರವಣದೋಷ ಇದ್ದವರ ಜೊತೆ ದೈಹಿಕ ಅಂಗವಿಕಲರಿಗೆ ಸಹ ಉದ್ಯೋಗದಲ್ಲಿ ಮೀಸಲಾಯಿ ಇದೆ. ಅರ್ಜಿ ಸಲ್ಲಿಸುವವರು ಸ್ಥಳೀಯರಾದರೆ ಇನ್ನಷ್ಟು ಅನುಕೂಲ. 18-45 ವರ್ಷದ ವಯೋಮಿತಿ ಹೊಂದಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಲು ಅರ್ಹರು.
ಎಲ್ಲಾ ತಾಲೂಕಿನಲ್ಲಿರುವ ಶಿಶು ಅಭಿವೃದ್ಧಿ ಯೋಜೆ ಕಚೇರಿಯಲ್ಲಿನ ಹಾಗೂ ತಾಲೂಕು ಪಂಚಾಯತದ ವಿವಿದ್ದೊದ್ದೇಶ ಪುನರ್ವಸತಿ ಕಾರ್ಯಕರ್ತರು ಈ ಉದ್ಯೋಗದ ಅರ್ಜಿ ತುಂಬಲು ನೆರವಾಗುತ್ತಾರೆ. ಆಸಕ್ತರು ಅರ್ಹತೆಯ ಅನುಗುಣವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಡಿಸೆಂಬರ್ 1ರ ಒಳಗೆ ಕಾರವಾರದ ವಿಕಲಚೇತನರ ಕಚೇರಿಗೆ ಕಳುಹಿಸಬೇಕಿದೆ.
ಅರ್ಜಿ ಕಳುಹಿಸಬೇಕಾದ ವಿಳಾಸ:
ರಾಘವೇಂದ್ರ ಜಿ ಭಟ್ಟ, ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ
ಜಿಲ್ಲಾ ವಿಕಲಚೇತನರ ಹಾಗೂ
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ (ಉ.ಕ)
You cannot copy content of this page