ಹಳಿಯಾಳದ ಮದ್ನಳ್ಳಿ ಹಾಗೂ ಆರ್ಲವಾಡಕ್ಕೆ ಕಳ್ಳರು ಬಂದಿದ್ದು, ಅಲ್ಲಿನ ಮನೆಗಳಿಗೆ ಕನ್ನ ಹಾಕಿದ್ದಾರೆ.
ಹಳಿಯಾಳ ಮದ್ನಳ್ಳಿಯ ಶಂಕರಯ್ಯ ವಿರುಪಾದಯ್ಯ ಹೀರೆಮಠ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಆರ್ಲವಾಡದ ಸಂತೋಷ ಏಕನಾಥ ಕೋಚಾರಿ ಅವರ ಮನೆಯಲ್ಲಿಯೂ ಚಿನ್ನಾಭರಣ ಕಾಣೆಯಾಗಿದೆ. ರೈತಾಪಿ ಕೆಲಸ ಮಾಡಿಕೊಂಡಿರುವ ಶಂಕರ ಹೀರೆಮಠ ಅವರ ಮನೆಗೆ ನುಗ್ಗಿದ ಕಳ್ಳರು 25 ಸಾವಿರ ರೂ ಹಣ, ಬಂಗಾರದ ಒಡವೆಯನ್ನು ದೋಚಿದ್ದಾರೆ. ಮೆಕಾನಿಕ್ ಆಗಿರುವ ಸಂತೋಷ ಕೋಚಾರಿ ಅವರ ಮನೆಗೆ ನುಗ್ಗಿದ ಕಳ್ಳರು 10 ಸಾವಿರ ರೂ ಹಣ ಹಾಗೂ ದೇವರ ಮೂರ್ತಿ, ದೇವರ ಆಭರಣಗಳನ್ನು ಕದ್ದಿದ್ದಾರೆ.
ಜನವರಿ 25 ಹಾಗೂ 26ರ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಜನವರಿ 28ರಂದು ಕಳ್ಳತನ ನಡೆದಿರುವುದು ಶಂಕರಯ್ಯ ಹೀರೆಮಠ್ ಅವರಿಗೆ ಗೊತ್ತಾಗಿದೆ. ಎರಡು ಕಡೆ ಮುಂದಿನ ಬಾಗಿಲು ಮುರಿದು ಕಳ್ಳರು ಮನೆಗೆ ನುಗ್ಗಿದ್ದಾರೆ. 1.48 ಲಕ್ಷ ರೂ ನಷ್ಟವಾದ ಬಗ್ಗೆ ಶಂಕರಯ್ಯ ಹೀರೆಮಠ್ ಅವರು ದೂರಿದ್ದಾರೆ. 56 ಸಾವಿರ ರೂ ನಷ್ಟವಾಗಿರುವ ಬಗ್ಗೆ ಸಂತೋಷ ಕೋಚಾರಿ ಅವರು ದೂರಿದ್ದಾರೆ. ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ನಡೆಸಿದ್ದಾರೆ.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’