ನಾಲ್ಕು ವರ್ಷದ ಹಿಂದೆ ಹಳಿಯಾಳದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಜೈಲು ಸೇರಿದರೂ ಜಾಮೀನುಪಡೆದು ಪರಾರಿಯಾಗಿದ್ದ ಧಾರವಾಡದ ಮಹಮದ್ ಇಸಾಕ್ ಅಬ್ದುಲ್ ರೇಹಮಾನ್ ಸೌಧಾಗರ ಇದೀಗ ಮತ್ತೆ ಜೈಲು ಪಾಲಾಗಿದ್ದಾರೆ.
ಧಾರವಾಡ ಜಿಲ್ಲೆಯ ಅಳ್ನಾವರದ ಮಹಮದ್ ಇಸಾಕ್ ಅಬ್ದುಲ್ ರೇಹಮಾನ್ ಸೌಧಾಗರ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ದೋಚಿದ್ದರು. ಪೊಲೀಸರು ಆ ವೇಳೆಯಲ್ಲಿಯೇ ಕಳ್ಳನನ್ನು ಬಂಧಿಸಿದ್ದು, ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದರು. ಸಾಕಷ್ಟು ಪ್ರಯತ್ನ ನಡೆಸಿದರೂ ಪೊಲೀಸರಿಗೆ ಮಹಮದ್ ಸಿಕ್ಕಿಬಿದ್ದಿರಲಿಲ್ಲ.
Advertisement. Scroll to continue reading.
Advertisement. Scroll to continue reading.
ಹೀಗಾಗಿ ಹಳಿಯಾಳ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದರು. ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಕಳ್ಳ ಹುಟ್ಟೂರಾದ ಆಳ್ನಾವರಕ್ಕೆ ಬರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಸಿಕ್ಕಿಬಿದ್ದ ಕಳ್ಳನನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.
Advertisement. Scroll to continue reading.
ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಕೃಷ್ಣಾ ಅರಕೇರಿ ಜೊತೆ ಸಿಬ್ಬಂದಿ ಶ್ರೀಶೈಲ್ ಜಿ ಎಂ, ಲಕ್ಷö್ಮಣ ಪೂಜಾರಿ, ಅರವಿಂದ ಭಜಂತ್ರಿ, ವಿನೋದ್ ಜಿ ಬಿ ಮತ್ತು ರಾಘವೇಂದ್ರ ಕೆರವಾಡ ಕಾರ್ಯಾಚರಣೆಯಲ್ಲಿದ್ದರು.