ಒಂದೇ ಕುಟುಂಬದ ಐದು ಜನ ಸಂಚರಿಸುತ್ತಿದ್ದ ಕಾರು ಶಿರಸಿಯಲ್ಲಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಬಾಲಕನ ಸಾವಾಗಿದೆ.
ಶಿರಸಿಯ ಸಿರ್ಸಿಮಕ್ಕಿ ಬಳಿ ಶನಿವಾರ ಬೆಳಗ್ಗೆ ಕಸ್ತೂರಬಾ ನಗರದ ಲಿಯಾಖತ್ ಮಹಮ್ಮದ್ ಅಲಿ ಸೌದಾಗರ ಕುಟುಂಬದವರು ಕಾರಿನಲ್ಲಿ ಹೋಗುತ್ತಿದ್ದರು. ಆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ದುರಂತದಲ್ಲಿ ಕಾರಿನ ಒಳಗಿದ್ದ 10 ವರ್ಷದ ಅಮಾನುಲ್ಲಾ ಸೌದಾಗರ ಅವರು ಸಾವನಪ್ಪಿದರು.
ಅದರ ಜೊತೆ, ಲಿಯಾಖತ್ ಮಹಮ್ಮದ್ ಅಲಿ ಸೌದಾಗರ, ಶಿರಿನ್ ಬಾನು ಸೇರಿದಂತೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡರು. ಲಿಯಾಖತ್ ಮಹಮ್ಮದ್ ಅಲಿ ಸೌದಾಗರ ಅವರು ಭಟ್ಕಳ ತಾಲೂಕಿನ ಶಿರೂರಿನ ದಾರೂಲ್ ಸುಲ್ ಶಾಲೆಯ ಶಿಕ್ಷಕರಾಗಿದ್ದಾರೆ. ಶಾಲೆಗೆ ರಜೆಯಿದ್ದ ಕಾರಣ ಅವರು ತಮ್ಮ ಕುಟುಂಬದ ಜೊತೆ ಊರಿಗೆ ಬರುತ್ತಿದ್ದರು. ಆ ವೇಳೆ ಅಪಘಾತ ನಡೆದಿದೆ.
ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ ಆರೈಕೆ ಮಾಡಲಾಗುತ್ತಿದೆ.