ಕುಮಟಾ ರಾಷ್ಟ್ರೀಯ ಹೆದ್ದಾರಿ ಪಕ್ಕ ರಾಶಿ ರಾಶಿ ಕಸದ ರಾಶಿ ಬಿದ್ದಿದ್ದು, ಈ ಬಗ್ಗೆ ದೂರು ಸಲ್ಲಿಕೆಯಾದ ತಕ್ಷಣ ಜಿಲ್ಲಾಡಳಿತ ಕ್ರಮ ಜರುಗಿಸಿದೆ.
ಮಂಗಳವಾರ ಹೆದ್ದಾರಿ ಪಕ್ಕ ಭಾರೀ ಪ್ರಮಾಣದಲ್ಲಿ ಕಸ ಬಿದ್ದಿತ್ತು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ನಾಯಿ ಸತ್ತು ಕೊಳೆತಿರುವ ಫೋಟೋವನ್ನು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಹಂಚಿಕೊAಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ವಾಟ್ಸಪ್ ದೂರು ವಿಭಾಗದವರು ಈ ದೂರು ಸ್ವೀಕರಿಸಿದ್ದು, ತಕ್ಷಣ ಕ್ರಮ ಜರುಗಿಸಿದ್ದಾರೆ.
ಅದರ ಪರಿಣಾಮ ಹೆದ್ದಾರಿ ಪಕ್ಕದ ತ್ಯಾಜ್ಯ ಕಣ್ಮರೆಯಾಗಿದೆ. ಹೆದ್ದಾರಿ ಪಕ್ಕ ಬಿದ್ದಿದ್ದ ಮಾಂಸದ ತ್ಯಾಜ್ಯ, ಅಲ್ಲಿದ್ದ ಕಸ ಹಾಗೂ ಇನ್ನಿತರ ಕೊಳಚೆಯನ್ನು ಪುರಸಭೆಯವರು ಸ್ವಚ್ಚ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಅಲ್ಲಿನ ತ್ಯಾಜ್ಯಗಳನ್ನು ತೆಗೆಯಲಾಗಿದ್ದು, ಜಿಲ್ಲಾಡಳಿತದ ಈ ಕ್ರಮಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸಂತಸವ್ಯಕ್ತಪಡಿಸಿದ್ದಾರೆ.