ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ವಿದ್ಯಾರ್ಥಿಗಳಿಗೆ ಗುದ್ದಿದೆ. ಅದಾದ ನಂತರ ಕಾರು ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಊರಿನ ಜನ ಚಾಲಕನ್ನು ಬೆನ್ನತ್ತಿ ಹಿಡಿದಿದ್ದಾರೆ.
Advertisement. Scroll to continue reading.
ಸೋಮವಾರ ಸಂಜೆ ಶಾಲೆ ಬಿಟ್ಟ ನಂತರ ಬಿಳಗಿ ಬಳಿ ಮಕ್ಕಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ, ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿತು. ಅದಾದ ನಂತರ ಕಾರು ರಸ್ತೆ ಬದಿಯ ಧ್ವಜ ಕಟ್ಟೆಗೆ ಡಿಕ್ಕಿಯಾಯಿತು. ನಂತರ ಅಂಗಡಿಯೊAದಕ್ಕೆ ಡಿಕ್ಕಿ ಹೊಡೆದು, ಅದಾದ ನಂತರ ಆ ಕಾರು ಶಾಲಾ ಮಕ್ಕಳಿಬ್ಬರಿಗೆ ಗುದ್ದಿತು.
ಈ ಅಪಘಾತದಲ್ಲಿ 7ನೇ ತರಗತಿಯ ಬಾಲಕಿ ಆಕೆಯ ತಮ್ಮನಿಗೆ ಗಾಯವಾಗಿದೆ. ಅವರಿಬ್ಬರನ್ನು ಸದ್ಯ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಚಾಲಕ ಕಾರು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಬೇರೆ ವಾಹನ ಏರಿ ಅಡಗಿದ್ದ ಚಾಲಕನನ್ನು ಊರಿನವರು ಹುಡುಕಿದ್ದಾರೆ. ಆ ವಾಹನದ ಬೆನ್ನತ್ತಿ ಹೋಗಿ ಆರೋಪಿಯನ್ನು ಹಿಡಿದಿದ್ದಾರೆ.
ಮಕ್ಕಳಿಗೆ ಕಾರು ಗುದ್ದಿದ ತಕ್ಷಣ ಅವರ ಆರೈಕೆ ಮಾಡುವ ಬದಲು ಪಲಾಯನಕ್ಕೆ ಯತ್ನಿಸಿದ ಚಾಲಕನ ವಿರುದ್ಧ ಜನ ಆಕ್ರೋಶಹೊರಹಾಕಿದ್ದಾರೆ. ಆ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
`ನಿಧಾನವಾಗಿ ವಾಹನ ಓಡಿಸಿ. ಮಕ್ಕಳ ಬಗ್ಗೆ ಕಾಳಜಿವಹಿಸಿ’