ಕೋಳಿ ಕಾಲಿಗೆ ಕತ್ತಿ ಕಟ್ಟಿ ಅವುಗಳ ಕಾದಾಟ ನಡೆಸಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಸಿದ ಇಬ್ಬರನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಮುಟ್ಟಳ್ಳಿಯ ಸುಕ್ರಪ್ಪ ಕನ್ನಯ್ಯ ನಾಯ್ಕ (63) ಮತ್ತು ಜಾಲಿಕೋಡಿಯ ಪುರುಷೋತ್ತಮ ತಂದೆ ಮಂಜುನಾಥ ನಾಯ್ಕ (36) ಅವರು ಕೋಳಿ ಅಂಕ ನಡೆಸುತ್ತಿದ್ದರು. ಫೆಬ್ರವರಿ 5ರ ಸಂಜೆ ಈ ಆಟದ ಬಗ್ಗೆ ಪೊಲೀಸರಿಗೆ ಪೋನ್ ಬಂದಿತು. ಕೋಣಾರ ಗ್ರಾಮದ ಕೆರೆಹಿತ್ಲು ಅರಣ್ಯಕ್ಕೆ ಪೊಲೀಸರು ಧಾವಿಸಿದರು.
ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಅದನ್ನು ಕಾದಾಟಕ್ಕೆ ಬಿಟ್ಟಿರುವುದನ್ನು ಪೊಲೀಸರು ನೋಡಿದರು. ಆ ಕೋಳಿಗಳ ಮೇಲೆ ಹಣ ಕಟ್ಟಿ ಕೆಲವರು ಜೂಜಾಡುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ಎಲ್ಲರೂ ಓಡಿ ಪರಾರಿಯಾಗಿದ್ದು, ಅದಾಗಿಯೂ ಪಿಸೈ ಮಲ್ಲೊಕಾರ್ಜುನ ಕೋರಾಣಿ ಇಬ್ಬರನ್ನು ಸೆದೆಬಡಿದರು. ಅವರಿಬ್ಬರ ವಿರುದ್ಧ ಕೇಸು ದಾಖಲಿಸಿದರು.