ಏಳು ದಶಕಗಳ ಕಾಲ ಆರೋಗ್ಯವಂತ ಜೀವನ ನಡೆಸಿದ ಮುಂಡಗೋಡ ನಂದಿಕಟ್ಟಾದ ಬಾಬಣ್ಣ ತಳವಾರ್ ಅವರು ಆರು ವರ್ಷದ ಅನಾರೋಗ್ಯಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಡಗೋಡ ರಾಮಾಪುರ ನಂದಿಕಟ್ಟಾದ ಬಾಬಣ್ಣ ರಾಜಪ್ಪ ತಳವಾರ (72) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಕಳೆದ ಆರು ವರ್ಷಗಳ ಹಿಂದೆ ಅವರಿಗೆ ಅನಾರೋಗ್ಯ ಕಾಡಿತು. ಎಲ್ಲಡೆ ಚಿಕಿತ್ಸೆಪಡೆದರೂ ಅದು ವಾಸಿಯಾಗಲಿಲ್ಲ.
ವಿವಿಧ ಆಸ್ಪತ್ರೆಗಳ ಓಡಾಟ ಮಾಡಿದ ಬಾಬಣ್ಣ ತಳವಾರ್ ಅವರು ಬಗೆ ಬಗೆಯ ಚಿಕಿತ್ಸೆಗೆ ಒಳಗಾದರು. ಆಸ್ಪತ್ರೆ ಓಡಾಟ ಹಾಗೂ ಔಷಧಿಗಾಗಿ ಹಣ ಖರ್ಚಾಯಿತೇ ವಿನ: ಆರೋಗ್ಯ ಸುಧಾರಿಸಲಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಫೆಬ್ರವರಿ 16ರ ರಾತ್ರಿ ಅವರು ನೇಣಿಗೆ ಶರಣಾದರು. ಅಜ್ಜನ ಸಾವಿನ ಬಗ್ಗೆ ಹಾವೇರಿ ಹಾನಗಲ್ಲಿನ ದೇವರಾಜ ಶಂಬಣ್ಣ ಮಕರವಳ್ಳಿ ಮಾಹಿತಿ ನೀಡಿದ್ದು, ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’