`ಯಲ್ಲಾಪುರ ಜಾತ್ರೆಯಲ್ಲಿ ಕಲರ್ ಬಾಲ್ ಆಟಕ್ಕೂ ಕಡಿವಾಣ ಹಾಕಬೇಕು’ ಎಂದು ಒಂದಷ್ಟು ಜನ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೂ ಲಿಖಿತ ಪತ್ರ ಸಲ್ಲಿಸಿದ್ದಾರೆ.
`ಫೆಬ್ರವರಿ 11ರಿಂದ ಯಲ್ಲಾಪುರ ಜಾತ್ರೆ ಶುರುವಾಗಿದ್ದು, ಅನೇಕ ಅಂಗಡಿಕಾರರು ವ್ಯಾಪಾರ ಮಾಡಿಕೊಂಡಿದ್ದಾರೆ. ಆದರೆ, ಮುಂಡಗೋಡು ರಸ್ತೆಯ ಸುಮಾರು 20 ಮಳಿಗೆಗಳಲ್ಲಿ ಜೂಜಾಟಕ್ಕೆ ಸಮಾನವಾದ ಕಲರ್ ಬಾಲ್, ರಿಂಗ್ ಎಸೆತ ನಡೆದಿದೆ. ಇಂಥ ಆಟಗಳಿಗಾಗಿ ಜನ ಹಣ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದ್ದಾರೆ.
`ಇಂಥ ಆಟ ಆಡಿಸುವವರು ಹಾಗೂ ಆಡುವವರ ನಡುವೆ ವಾಗ್ವಾದ ನಡೆಯುತ್ತಿರುವುದರಿಂದ ಅದನ್ನು ತಡೆಯಬೇಕು. ತಂಟೆ-ತಕರಾರು ಕಡಿಮೆ ಮಾಡುವುದಕ್ಕಾಗಿ ಇಂಥ ಆಟಗಳನ್ನು ತಡೆಯುವ ಅನಿವಾರ್ಯವಿದ್ದು, ಜಾತ್ರೆ ಶುರುವಾಗುವ ಮುನ್ನವೇ ಈ ಬಗ್ಗೆ ತಿಳಿಸಲಾಗಿತ್ತು. ಅದಾಗಿಯೂ, ಕೆಲ ಆಟಗಳು ಬಂದಿವೆ. ಆಟ ನಿಲ್ಲಿಸುವಂತೆ ಅಂಗಡಿಕಾರರ ಬಳಿ ಮನವಿ ಮಾಡಿದರೂ ಪ್ರಯೊಜನವಾಗಿಲ್ಲ’ ಎಂದು ದೂರಿದ್ದಾರೆ.