`ಶಿವರಾತ್ರಿಯ ಒಳಗೆ ಗಂಗಾವಳಿ-ಮoಜಗುಣಿ ಮಾರ್ಗವಾಗಿ ನಿರ್ಮಿಸಿದ ಸೇತುವೆ ಮೇಲೆ ಬಸ್ ಬಿಡದೇ ಇದ್ದರೆ ಪ್ರತಿಭಟನೆ ಅನಿವಾರ್ಯ’ ಎಂದು ಕರಾವಳಿ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ ಅವರು ಎಚ್ಚರಿಸಿದ್ದಾರೆ. `ಪ್ರತಿಭಟನೆ ವೇಳೆ ಎಲ್ಲಾ ವಾಹನ ತಡೆಯುವುದು ಅನಿವಾರ್ಯ’ ಎಂದವರು ಹೇಳಿದ್ದಾರೆ.
ಗಂಗಾವಳಿಯ ನೂತನ ಸೇತುವೆಗೆ ಭೇಟಿ ನೀಡಿದ ಅವರು `ಸೇತುವೆಯ ಕಾಮಗಾರಿ ಪೂರ್ಣಗೊಳಿಸುವವರೆಗೂ ಹೋರಾಟ ನಡೆಯಿತು. ಅದಾದ ನಂತರ ಸೇತುವೆ ಮೇಲೆ ಬಸ್ ಓಡಾಟ ಶುರು ಮಾಡುವಂತೆಯೂ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ. ಎಲ್ಲಾ ವಾಹನ ಓಡಾಟ ನಡೆದರೂ ಬಸ್ಸುಗಳ ಓಡಾಟ ಮಾತ್ರ ಶುರುವಾಗಿಲ್ಲ. ಅಗತ್ಯ ಸೇವೆ ಒದಗಿಸುವಲ್ಲಿ ಅನಗತ್ಯ ವಿಳಂಭ ಮಾಡಲಾಗುತ್ತಿದೆ’ ಎಂದವರು ದೂರಿದರು.
ಸಂಘಟನೆ ಪ್ರಮುಖರಾದ ಗಣಪತಿ ನಾಯ್ಕ, ನಾಗೇಂದ್ರ ಪಡ್ತಿ, ಕುಮಾರ ದಿವಟಗಿ ಹಾಗೂ ಸ್ಥಳೀಯರಾದ ವಸಂತ ಗೌಡ, ವೆಂಕಟೇಶ್ ಕಿಣಿ, ಪಾಂಡುರoಗ ಎಂ ನಾಯ್ಕ್, ರಾಜು ಗಾಂವ್ಕರ್, ದೇವು ಅಂಬಿಗ, ಹುಲಿಯಪ್ಪ ನಾಯ್ಕ, ಬಶೀರ್ ಸಾಬ್ ಬಸ್ ಬಿಡುವಂತೆ ಆಗ್ರಹಿಸಿದರು.