ಕಾರವಾರದ ಬಾಡದಲ್ಲಿರುವ ಶ್ರೀ ಮಹಾದೇವಸ್ಥಾನ ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ. ಫೆಬ್ರವರಿ 15ರಂದು ಅದ್ಧೂರಿ ಶಿವರಾತ್ರಿ ಉತ್ಸವ ಇಲ್ಲಿ ನಡೆಯಲಿದೆ.
ಶಿವರಾತ್ರಿಯ ದಿನದಂದು ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನದ ವತಿಯಿಂದ ಅಭಿಷೇಕ ನಡೆಯಲಿದೆ. ತದನಂತರ ಪ್ರಾತ ಕಾಲ 2.30ರಿಂದ ಪ್ರಾರಂಭವಾಗಿ ಪ್ರತಿ ಒಂದು ತಾಸಿನ ಅವಧಿಯ ಸರಣಿಯಂತೆ ಅಭಿಷೇಕಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 70ರೂ ಪಾವತಿಸಿ ಸಾರ್ವಜನಿಕರು ಅಭಿಷೇಕ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ಫೆಬ್ರವರಿ 5ರಿಂದ ದೇವಸ್ಥಾನದ ಕಚೇರಿಯಲ್ಲಿ ಅಭಿಷೇಕದ ಕೂಪನ್ ಕೊಡಲಾಗುತ್ತದೆ.
ವಯಸ್ಕರಿಗೆ ವಿಶೇಷ ವ್ಯವಸ್ಥೆ ಮೂಲಕ ದೇವರ ಅಭಿಷೇಕ ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಜನ ಈ ಅವಕಾಶ ಬಳಸಿಕೊಂಡು ದೇವರ ಸೇವೆಗೆ ಬರಬೇಕು ಎಂದು ಶ್ರೀ ಮಹಾದೇವ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಚೇರಿ ಸಂಪರ್ಕಿಸಲು ಕೋರಿದೆ.