ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಶ್ವಾನ ಪ್ರೇಮಿಗೆ ಕಪಾಳ ಮೋಕ್ಷ!
May 12, 2026
ಆತ ಅಧಿಕಾರಿಯೇ ಅಲ್ಲ!
May 11, 2026
ಯಲ್ಲಾಪುರದ ಉಮ್ಮಚ್ಗಿಯ ನಾಗೇಂದ್ರ ಬೋವಿವಡ್ಡರ್ ಹಾಗೂ ನಮಿತಾ ಬೋವಿವಡ್ಡರ್ ದಂಪತಿ ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ನಾಗೇಂದ್ರ ಬೋವಿವಡ್ಡರ್ ಅವರು ಸಾವನಪ್ಪಿದ್ದಾರೆ.
ಯಲ್ಲಾಪುರದ ಉಮ್ಮಚ್ಗಿ ಸುಂಕದಗುoಡಿಯಲ್ಲಿ ನಾಗೇಂದ್ರ ರಾಮಣ್ಣ ಬೋವಿವಡ್ಡರ್ (26) ಅವರು ವಾಸವಾಗಿದ್ದರು. ಯಾವುದೋ ಒಂದು ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆದರೆ, ಆ ಸಮಸ್ಯೆ ಯಾವುದು? ಎಂದು ಯಾರಿಗೂ ಗೊತ್ತಾಗಿರಲಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಅವರು ಫೆಬ್ರವರಿ 7ರಂದು ವಿಷ ಸೇವಿಸಿದ್ದರು.
ಇದನ್ನು ನೋಡಿದ ಕೆಲವರು ಆ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶಿರಸಿ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಾದ ನಾಗೇಂದ್ರ ಬೋವಿವಡ್ಡರ್ ಅವರು ಚೇತರಿಸಿಕೊಳ್ಳಲಿಲ್ಲ. ಇನ್ನಷ್ಟು ಅಸ್ವಸ್ಥರಾದ ಅವರನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ದರಳಕಟ್ಟೆಗೆ ಕಳುಹಿಸಲಾಯಿತು. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾಗೇಂದ್ರ ಬೋವಿವಡ್ಡರ್ ಅವರಿಗೆ ಆರೈಕೆ ಮಾಡಿ ಬದುಕಿಸುವ ಪ್ರಯತ್ನ ನಡೆಯಿತು.
ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಫೆಬ್ರವರಿ 11ರಂದು ನಾಗೇಂದ್ರ ಬೋವಿವಡ್ಡರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಉಮ್ಮಚ್ಗಿಯ ಸಿವಿಲ್ ಗುತ್ತಿಗೆದಾರ ಗೋವಿಂದ ಬಸಾಪುರ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದು, ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.
You cannot copy content of this page