• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Secret video on Sandeepan's mobile!

ಕುಮಟಾ | ಸಂದೀಪನ ಮೊಬೈಲಿನಲ್ಲಿ ರಹಸ್ಯ ವಿಡಿಯೋ!

September 29, 2026
Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

ADVERTISEMENT
  • Home
  • Janamata
Wednesday, September 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಫೋನ್ ಪೇ: ಆತನ ಬದಲು ಈತನ ಖಾತೆ ಸೇರಿದ ಕಾಸು!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಗಣಪತಿ ನಾಯ್ಕ ಅವರು ತಮ್ಮ ಕಣ್ತಪ್ಪಿನಿಂದ ಸಂತೋಷಕುಮಾರ ಆಚಾರಿ ಅವರಿಗೆ 5 ಸಾವಿರ ರೂ ಪೋನ್ ಪೇ ಮಾಡಿದ್ದಾರೆ. ಆ ಹಣ ಮರಳಿ ಕೇಳಿದ ಕಾರಣ ಗಣಪತಿ ನಾಯ್ಕ ಅವರು ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದಾರೆ.

ಹೊನ್ನಾವರದ ಗೇರುಸೊಪ್ಪ ಬಳಿಯ ವರ್ನಕೋಡದ ಗಣಪತಿ ನಾರಾಯಣ ನಾಯ್ಕ ಅವರು ವಿದ್ಯುತ್ ನಿಗಮದಲ್ಲಿ ಚಾಲಕರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಜನವರಿ 7ರಂದು ಅವರು ಗೇರುಸೊಪ್ಪದಲ್ಲಿ ಅಂಗಡಿಹೊಂದಿದ ಸಂತೋಷ ಅವರ ಖಾತೆಗೆ 5 ಸಾವಿರ ರೂ ಹಾಕಬೇಕಿದ್ದು, ಅಲ್ಲಿ ಹಣ ಹಾಕುವ ಬದಲು ಕೆಪಿಸಿ ಕಾಲೋನಿಯ ಸಂತೋಷಕುಮಾರ ರಾಮಚಂದ್ರ ಆಚಾರಿ ಅವರ ಖಾತೆಗೆ ಪೋನ್‌ ಪೇ ಮಾಡಿದ್ದಾರೆ. ನಂತರ ಮತ್ತೆ 3030ರೂ ಹಣ ಕಳುಹಿಸಿದ್ದಾರೆ.

ಅದಾದ ನಂತರ ಅಂಗಡಿ ಸಂತೋಷ ಅವರಿಗೆ ಹಾಕಬೇಕಾದ ಹಣ ಕೆಪಿಸಿಯಲ್ಲಿ ಕೆಲಸ ಮಾಡುವ ಸಂತೋಷ ಆಚಾರಿ ಅವರಿಗೆ ಪಾವತಿ ಆಗಿರುವುದು ಗಣಪತಿ ನಾಯ್ಕ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಗಣಪತಿ ನಾಯ್ಕ ಅವರು ಸಂತೋಷ ಆಚಾರಿ ಅವರಲ್ಲಿ ವಿಚಾರಿಸಿದ್ದಾರೆ. ಮೊದಲು ‘ಹಣ ಬಂದೇ ಇಲ್ಲ’ ಎಂದಿದ್ದ ಸಂತೋಷ ಆಚಾರಿ, ಸ್ಕ್ರೀನ್ ಶಾಟ್ ಕಾಣಿಸಿದ ನಂತರ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ.

‘ಕಣ್ತಪ್ಪಿನಿಂದ ಹಣ ಕಳುಹಿಸಿದ್ದೇನೆ. ಅದನ್ನು ಮರಳಿಸು’ ಎಂದು ಗಣಪತಿ ನಾಯ್ಕ ಅವರು ಮನವಿ ಮಾಡಿದ್ದಾರೆ. ‘ನಾಳೆ ಕೊಡುವೆ’ ಎನ್ನುತ್ತಲೇ ಸಂತೋಷ ಆಚಾರಿ ಅವರು ತಿಂಗಳು ಕಳೆದಿದ್ದಾರೆ. ‘ಆ ಸಂತೋಷ ಹಣ ಕೊಡುತ್ತಿಲ್ಲ’ ಎಂದು ಗಣಪತಿ‌ ನಾಯ್ಕ ಅವರು ಎಲ್ಲಾ ಕಡೆ ಹೇಳಿದ್ದು ಸಂತೋಷ ಆಚಾರಿ ಅವರ ಸಿಟ್ಟಿಗೆ ಕಾರಣವಾಗಿದೆ. ಹೀಗಿರುವಾಗ ಫೆಬ್ರವರಿ 4ರಂದು ಗೇರುಸೊಪ್ಪದ ಕನ್ನಿಕಾ ಹೊಟೇಲ್ ಎದುರು ಗಣಪತಿ‌ ನಾಯ್ಕ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಸಂತೋಷ ಆಚಾರಿ ಅವರು ‘ಹಣ ಕೊಡುವುದಿಲ್ಲ’ ಎಂದು ಕೂಗಾಡಿದ್ದಾರೆ. ಜೊತೆಗೆ ಗಣಪತಿ ನಾಯ್ಕ ಅವರ ಮೇಲೆ‌ ಕೈ ಮಾಡಿದ್ದಾರೆ.

ಈ ವೇಳೆ ಹೊಟೇಲಿನಲ್ಲಿದ್ದ ಯೋಗೇಶ‌ ನಾಯ್ಕ, ರಾಮಾ ನಾಯ್ಕ ಹಾಗೂ ಇನ್ನಿತರ ಜನ ಸೇರಿ ಆ ಹೊಡೆದಾಟ ತಪ್ಪಿಸಿದ್ದಾರೆ. ಅದಾಗಿಯೂ, ಸಂತೋಷ ಆಚಾರಿ ಅವರು ಗಣಪತಿ ನಾಯ್ಕ ಅವರ ಕಡೆ ಕಲ್ಲು ಬೀಸಿದ್ದಾರೆ. ಕಲ್ಲು ತಾಗಿದ್ದರಿಂದ ಗಣಪತಿ ನಾಯ್ಕ ಅವರು ಗಾಯಗೊಂಡಿದ್ದು, ಅವರನ್ನು ಕೆಪಿಸಿ ಆಂಬುಲೆನ್ಸಿನ ಮೂಲಕ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಗಣಪತಿ ನಾಯ್ಕ ಅವರು ಚಿಕಿತ್ಸೆಪಡೆದರು.

ಹೊನ್ನಾವರ ಎಸೈ ಗಿರೀಶ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಗಣಪತಿ ನಾಯ್ಕ ಅವರ ಆರೋಗ್ಯ‌ ವಿಚಾರಿಸಿದರು. ಗಣಪತಿ ನಾಯ್ಕ ಅವರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Secret video on Sandeepan's mobile!

ಕುಮಟಾ | ಸಂದೀಪನ ಮೊಬೈಲಿನಲ್ಲಿ ರಹಸ್ಯ ವಿಡಿಯೋ!

September 29, 2026
Karwar Arrogance did not go down even though he was suspended!

ಕಾರವಾರ | ಸಸ್ಪೆಂಡ್ ಆದರೂ ಸೊಕ್ಕು ಇಳಿಯಲಿಲ್ಲ!

September 29, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ಮಗಳ ಮೇಲಿನ ಚಿಂತೆಗೆ ತಾಯಿ ಆತ್ಮಹತ್ಯೆ!

September 29, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383