ಶಿವರಾತ್ರಿ ಅಮಾವಾಸ್ಯೆ ಜಾತ್ರೆ ಮುಗಿಸಿ ಕಾರವಾರದ ಮಾಜಾಳಿ ಕಡಲತೀರದ ಸ್ನಾನಕ್ಕೆ ಹೋಗಿದ್ದ ಮಾಜಾಳಿ ಗಾಂವಗೇರಿಯ ಯಶ್ ಅವರು ಉಪ್ಪು ನೀರು ಕುಡಿದು ಸಾವನಪ್ಪಿದ್ದಾರೆ. ತೀವೃ ಅಸ್ವಸ್ಥರಾದ ಅವರನ್ನು ಬದುಕಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಕಾರವಾರ ತಾಲೂಕಿನ ಮಾಜಾಳಿಯ ಬಾವಳ್ ಕಡಲತೀರದಲ್ಲಿ 17 ವರ್ಷದ ಯಶ್ ಅವರು ಸ್ನಾನಕ್ಕೆ ಹೋಗಿದ್ದರು. ಸಮುದ್ರದಲ್ಲಿ ಈಜುತ್ತಿದ್ದ ಅವರಿಗೆ ಅಲೆಯೊಂದ ಅಬ್ಬರಿಸಿದ್ದು, ಅದಾದ ನಂತರ ಅವರು ಆಳ ಸಮುದ್ರದ ಕಡೆ ಕೊಚ್ಚಿ ಹೋದರು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದು ಅಸ್ವಸ್ಥರಾಗಿದ್ದ ಯಶ್ ಅವರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸುವ ಪ್ರಯತ್ನ ಮಾಡಿದರು. ಯಶ್ ಅವರನ್ನು ದಡಕ್ಕೆ ಕರೆ ತಂದಾಗ ಅವರಿಗೆ ಜೀವವಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನ ಕೊನೆಯುಸಿರೆಳೆದರು.
ಮಲ್ಲಾಪುರ ಪಿಎಸ್‌ಐ ಸುನೀಲ್ ಬಂಡಿವಡ್ಡರ್ ಅವರು ತಮ್ಮ ಪೊಲೀಸ್ ವಾಹನದಲ್ಲಿ ಯಶ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಯಶ್ ಅವರ ತಪಾಸಣೆ ನಡೆಸಿದ ವೈದ್ಯರು ಸಾವನಪ್ಪಿದ ವಿಷಯ ಘೋಷಿಸಿದರು. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಬ್ಬದ ದಿನ ಸಾವು ನೋಡಿ ಊರಿನವರು ಶೋಕದಲ್ಲಿದ್ದಾರೆ.