ಮುಂಡಗೋಡದ ಬಸವರಾಜ ಮೋರೆನ್ನವರ್ ಅವರು ಅತ್ತೆ-ಮಾವನ ಕಾಟ ಸಹಿಸಲಾಗದೇ ಸಾವಿಗೆ ಶರಣಾಗಿದ್ದಾರೆ.
ಮುಂಡಗೋಡದ ಉಗ್ಗಿನಕೇರಿಯ ದೇವರಾಜ ಶಂಕರಪ್ಪ ಮೊರೇನವರ್ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. `ಬಸವರಾಜ ದೇವೇಂದ್ರಪ್ಪ ಮೋರೆನ್ನವರ್ ಅವರು ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದು, ಅವರ ಅತ್ತೆ ಜಗನ್ಮಾಥ, ಮಾವ ಪ್ರಬಪ್ಪ ಹಾಗೂ ಸಂಬAಧಿಕರಾದ ಉಮೇಶ ಹಾಗೂ ಆನಂದರ ಕಿರುಕುಳವೇ ಇದಕ್ಕೆ ಕಾರಣ’ ಎಂದು ದೂರಿದ್ದಾರೆ.
ಹುಬ್ಬಳ್ಳಿಯ ಗೋಪಿನಕೊಪ್ಪದಲ್ಲಿ ಆರೋಪಿತರು ವಾಸವಾಗಿದ್ದು, ಬಸವರಾಜ ಮೋರೆನ್ನವರ್ ಅವರಿಗೆ ಅವರೆಲ್ಲರೂ ಪದೇ ಪದೇ ಹಿಂಸೆ ನೀಡುತ್ತಿದ್ದರು. ಆ ಮಾನಸಿಕ ಕಿರುಕುಳ ಸಹಿಸಲಾಗದೇ ಬಸವರಾಜ ಮೋರೆನ್ನವರ್ ಅವರು ಫೆಬ್ರವರಿ 7ರ ಸಂಜೆ ಕ್ರಿಮಿನಾಶಕ ಸೇವಿಸಿದರು. ಫೆಬ್ರವರಿ 8ರಂದು ಅವರು ಸಾವನಪ್ಪಿದ್ದಾರೆ ಎಂದು ದೇವರಾಜ ಮೊರೇನವರ್ ಅವರು ದೂರಿದ್ದಾರೆ.
ಹಿಂಸೆ ನೀಡಿದ ಆ ಎಲ್ಲಾ ಆರೋಪಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದು, ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.