ಕಾರವಾರದ ಮಹಾದೇವ ಠಕ್ಕರಕರ್ ಅವರು ಆರು ತಿಂಗಳ ಹಿಂದೆ ಸಾವನಪ್ಪಿದ್ದು, ಆ ನೋವು ಸಹಿಸಲಾಗದೇ ಅವರ ಮಗ ಸಂದೀಪ ಠಕ್ಕರಕರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾರವಾರದ ಚಿತ್ತಾಕುಲ ಬಳಿಯ ಕೊಳಗೆ ಗಣೇಶ ನಗರದಲ್ಲಿ ಸಂದೀಪ ಮಹಾದೇವ ಠಕ್ಕರಕರ್ (39) ಅವರು ವಾಸವಾಗಿದ್ದರು. ಕೊಂಕಣ ರೈಲ್ವೆಯ ಗುತ್ತಿಗೆದಾರರ ಬಳಿ ಕೆಲಸ ಸಂದೀಪ ಠಕ್ಕರಕರ್ ಅವರು ಕೆಲಸ ಮಾಡಿಕೊಂಡಿದ್ದರು. ತಂದೆ ಸಾವಿನ ನಂತರ ಸಂದೀಪ ಅವರು ಕೆಲಕ್ಕೆ ಹೋಗುವುದನ್ನು ನಿಲ್ಲಿಸಿದರು. ತಂದೆ ಕಳೆದುಕೊಂಡ ನೋವಿನಲ್ಲಿಯೇ ಸರಾಯಿ ಸೇವನೆ ಶುರು ಮಾಡಿದರು.
ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಸಂದೀಪ ಠಕ್ಕರಕರ್ ಅವರ ಸರಾಯಿ ಸೇವನೆಯ ಚಟ ವಿಪರೀತವಾಯಿತು. ಮಾನಸಿಕ ಖಿನ್ನತೆಗೆ ಒಳಗಾದ ಅವರು ಜನವರಿ 31ರಂದು ಆತ್ಮಹತ್ಯೆಗೆ ಶರಣಾದರು. ಮನೆ ಒಳಗಿನ ಕಟ್ಟಿಗೆ ಜಂತಿಗೆ ಕಪ್ಪು ಕೇಬಲ್ ವೈಯರ್ ಕಟ್ಟಿಕೊಂಡು ನೇಣು ಹಾಕಿಕೊಂಡರು. ಫೆಬ್ರವರಿ 1ರ ಸಂಜೆ ಸಂದೀಪ ಠಕ್ಕರಕರ್ ಅವರು ಸಾವನಪ್ಪಿರುವುದನ್ನು ಅವರ ಸಹೋದರ ರಾಜೇಶ ಮಹಾದೇವ ಠಕ್ಕರಕರ್ ಅವರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಚಿತ್ತಾಕುಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದರು.