ಅಂಬೇಡ್ಕರ್ ಜಯಂತಿ ಹಿನ್ನಲೆ ಶಿರಸಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಆ ಆದೇಶವನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ನಡೆದಿದೆ.
ಮದ್ಯ ಮಾರಾಟ ನಿಷೇಧದ ದಿನ ಗೂಡಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಸರಾಯಿ ಮಾರಾಟ ನಡೆದಿದೆ. ಶಿರಸಿ ಬಿಡ್ಕಿಬೈಲಿನ ಅಂಚೆ ಕಚೇರಿ ಹಿಂದೆ ಅಶೋಕ ಚೆನ್ನಬಸಪ್ಪ ಅವರು ಗೂಡಗಂಡಿ ಹೊಂದಿದ್ದು, ಅಲ್ಲಿ ರಾಜಾರೋಷವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಮದ್ಯ ಮಾರಾಟದ ವಿಡಿಯೋ ವೈರಲ್ ಆಗಿದ್ದು, ಅಕ್ರಮ ಮದ್ಯದಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಶಿರಸಿ ನಗರ ಪೊಲೀಸ್ ಠಾಣೆ ಪಿಸೈ ನರಸಿಂಹಲು ಅವರು ಆ ಗೂಡಂಗಡಿ ಬಳಿ ತೆರಳಿದಾಗ ಅಲ್ಲಿ ಮದ್ಯ ಮಾರಾಟ ನಡೆದಿರುವುದು ಖಚಿತವಾಗಿದೆ. ಅಂಬೇಡ್ಕರ್ ಜಯಂತಿ ಹಿನ್ನಲೆ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಅದಾಗಿಯೂ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆದಿದನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಅಂಗಡಿ ಮೇಲೆ ದಾಳಿ ನಡೆಸಿದಾಗ ಅಲ್ಲಿ ಮದ್ಯ ಮಾರಾಟ ಮಾಡಿದ ಅನೇಕ ಸುಳಿವು ಕಾಣಿಸಿದೆ. ಮದ್ಯದ ಪ್ಯಾಕೇಟುಗಳ ಜೊತೆ ವಿವಿಧ ಬಾಟಲಿಗಳು ಸಹ ಆ ಗೂಡಂಗಡಿಯಲ್ಲಿ ಸಿಕ್ಕಿದೆ.
ಈ ಎಲ್ಲಾ ಹಿನ್ನಲೆ ಪೊಲೀಸರು ಅಕ್ರಮ ಮದ್ಯ ಮಾರಾಟಗಾರ ಅಶೋಕ ಚೆನ್ನಬಸಪ್ಪ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಅವರ ಅಂಗಡಿಯಲ್ಲಿದ್ದ ಮದ್ಯದ ಬಾಟಲಿ ಹಾಗೂ ಪ್ಯಾಕೇಟ್ ಜೊತೆ ಇನ್ನಿತರ ವಸ್ತುಗಳನ್ನು ಜಪ್ತು ಮಾಡಿ ಪ್ರಕರಣ ದಾಖಲಿಸಿದ್ದಾರೆ.