ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಪುತ್ರ ಆಶಿತೋಷ ಹೆಗಡೆ ಅವರ ವಿರುದ್ಧ ದಾಖಲಾದ ಹೊಡೆದಾಟ ಪ್ರಕರಣಕ್ಕೆ ಸಂಬoಧಿಸಿ ನ್ಯಾಯಾಲಯ ಪೊಲೀಸ್ ವಿಚಾರಣೆಗೆ ತಡೆ ನೀಡಿದೆ.
2025ರ ಜೂನ್ ಅವಧಿಯಲ್ಲಿ ತುಮಕೂರಿನ ಬಳಿ ಸೈಫ್ ಖಾನ್ ಎಂಬಾತರು ಅನಂತಕುಮಾರ ಹೆಗಡೆ ಅವರ ಕಾರು ಹಿಂದಿಕ್ಕಿದ್ದರು. ಆ ವೇಳೆ ಗಲಾಟೆ ನಡೆದಿದ್ದು, ಅನಂತಕುಮಾರ ಹೆಗಡೆ ಅವರ ಗನ್ ಮ್ಯಾನ್ ಪಿಸ್ತೂಲು ತೋರಿಸಿ ಹೆದರಿಸಿದ್ದರು. ಈ ವೇಳೆ ಅನಂತಕುಮಾರ ಹೆಗಡೆ ಅವರ ಪುತ್ರ ಅಶುತೋಷ್ ಹೆಗಡೆ ಅವರು ಸಹ ಅದೇ ಕಾರಿನಲ್ಲಿದ್ದು, ಕಾರಿನಿಂದ ಇಳಿದು ಗಲಾಟೆ ಮಾಡಿದ್ದರು. ಅದಾದ ನಂತರ ಸೈಫ್ ಖಾನ್ ಅವರು `ಅನಂತಕುಮಾರ ಹೆಗಡೆ ಅವರ ಕಾರಿನಲ್ಲಿದ್ದವರು ನಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಅವರ ಮೂರು ಹಲ್ಲು ಮುರಿದಿದೆ. ಅನಂತಕುಮಾರ್ ಹೆಗಡೆ ಅವರು ನಮ್ಮ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅವರ ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಸಿದ್ದಾರೆ’ ಎಂದು ದೂರಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
`ಅಶುತೋಷ್ ಹೆಗಡೆ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ವಿರುದ್ಧ ದಾಖಲಾದ ಹೊಡೆದಾಟ ಪ್ರಕರಣ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಹೊಡೆದಾಟ ಪ್ರಕರಣದಲ್ಲಿ ಅಶುತೋಷ್ ಹೆಗಡೆ ಅವರು ಆರೋಪಿಯಾಗಿರುವುದರಿಂದ ಅವರಿಗೆ ಪಾರ್ಸಪೋರ್ಟ ಸಮಸ್ಯೆ ಎದುರಾಗಿದೆ. ಹೀಗಾಗಿ ಅವರನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಹೈಕೋರ್ಟ ಮೊರೆ ಹೋಗಿದ್ದರು. `ವಿದೇಶದಲ್ಲಿ ಓದುತ್ತಿದ್ದ ಆಶಿತೋಷ ಹೆಗಡೆ ಅವರು ತಮ್ಮ ಅಜ್ಜ-ಅಜ್ಜಿ ನೋಡಲು ಭಾರತಕ್ಕೆ ಮರಳಿದ್ದರು. ಪ್ರಕರಣದಲ್ಲಿ ಆಶಿತೋಷ ಹೆಗಡೆ ಅವರ ಹೆಸರಿದ್ದರೂ ಆರೋಪ ಪಟ್ಟಿಯಲ್ಲಿ ಯಾವುದೇ ಅಂಶ ದಾಖಲಾಗಿಲ್ಲ. ಆಶಿತೋಷ್ ಹೆಗಡೆ ಅವರ ವಿರುದ್ಧ ದಾಖಲೆಗಳು ಇಲ್ಲ. ತಾಂತ್ರಿಕ ಕಾರಣದಿಂದ ಆಶಿತೋಷ ಹೆಗಡೆ ಅವರು ಸಮಸ್ಯೆ ಅನುಭವಿಸುವುದು ಸರಿಯಲ್ಲ’ ಎಂದು ಹೆಗಡೆ ಪರ ವಕೀಲ ಪವನಚಂದ್ರ ಶೆಟ್ಟಿ ಅವರು ವಾದಿಸಿದರು. `ಈ ಹಿನ್ನಲೆ ಆಶಿತೋಷ ಹೆಗಡೆ ಅವರ ಹೆಸರನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಮನವಿ ಮಾಡಿದರು.
ವಿಚಾರಣೆ ನಡೆಸಿದ ನ್ಯಾಯಾಲಯ ಈ ಹೊಡೆದಾಟ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಆಷಿತೋಷ ಹೆಗಡೆ ಅವರ ಬಗ್ಗೆ ವಿಚಾರಣೆಗೆ ತಡೆ ನೀಡಿದೆ. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.