ಜೊಯಿಡಾದ ಬಾಬು ಕರೋಶಿ ಅವರು ಓಡಿಸುತ್ತಿದ್ದ ಕ್ರೂಸರ್ ಬೈಕಿಗೆ ಗುದ್ದಿದೆ. ಪರಿಣಾಮ ಆ ಬೈಕಿನಲ್ಲಿದ್ದ ವಿನಾಯಕ ಗಂಜಿಗಟ್ಟಿ ಅವರು ಸಾವನಪ್ಪಿದ್ದಾರೆ.
ಜೊಯಿಡಾದ ಗುಂದ ಗ್ರಾಮದ ಅವರ್ಲಿ ಬಳಿ ಮಂಗಳವಾರ ಈ ಅಪಘಾತ ನಡೆದಿದ್ದು, ಗಾಯಗೊಂಡಿದ್ದ ಧಾರವಾಡದ ವಿನಾಯಕ ಗಂಜಿಗಟ್ಟಿ ಅವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ಆಸ್ಪತ್ರೆ ಸೇರುವ ಮುನ್ನ ಅವರು ಸಾವನಪ್ಪಿದರು. ನಾಲ್ವರು ಸ್ನೇಹಿತರು ಎರಡು ಬೈಕಿನಲ್ಲಿ ಉಳವಿ ದೇವಸ್ಥಾನಕ್ಕೆ ಆಗಮಿಸಿದ್ದು, ಊರಿಗೆ ಮರಳುವ ವೇಳೆ ಈ ಅವಘಡ ನಡೆದಿದೆ. ಆಕಾಶ ಚವಗಿ ಅವರು ಸಹ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಜೊಯಿಡಾ ಗಾವಡೆವಾಡದ ಬಾಬು ಕರೋಶಿ ಅವರು ಕ್ರೂಸರ್ ಓಡಿಸುತ್ತಿದ್ದರು. ಅವರೇ ವೇಗವಾಗಿ ಬಂದು ಬೈಕಿಗೆ ಕ್ರೂಸರ್ ಡಿಕ್ಕಿ ಹೊಡೆದರು. ಈ ಬಗ್ಗೆ ಧಾರವಾಡದ ಮಂಜುನಾಥ ಗಂಜಿಗಟ್ಟಿ ಅವರು ಪೊಲೀಸ್ ದೂರು ನೀಡಿದ್ದಾರೆ. ಬಾಬು ಕರೋಶಿ ಅವರ ವಿರುದ್ಧ ಜೊಯಿಡಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.