ಕುಮಟಾದಿಂದ ಅಂಕೋಲಾಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇಂಜಿನ್ ಭಾಗಕ್ಕೆ ನೀರು ಹಾಕಿದ ನಂತರ ಬಸ್ಸು ಮುಂದೆ ಚಲಿಸಿದೆ. ಈ ಬಸ್ಸು ಕುಮಟಾದಿಂದ ಅಂಕೋಲಾಗೆ ಬರುವವರೆಗೂ ಸುಮಾರು 100 ಲೀಟರ್ ನೀರು ಕುಡಿದಿದೆ.
ಕುಮಟಾದಿಂದ ಹೊರಟ ಬಸ್ಸು 500ಮೀ ಚಲಿಸಿದಾಗ ಹೊಗೆ ಕಾಣಿಸಿದೆ. ಆತಂಕಕ್ಕೆ ಒಳಗಾದ ಕೆಲ ಪ್ರಯಾಣಿಕರು ಟಿಕೆಟ್ ಮಾಡಿದ್ದರೂ ಆ ಬಸ್ಸಿನಿಂದ ಆಗಲೇ ಕೆಳಗೆ ಇಳಿದಿದ್ದಾರೆ. ಆ ಕ್ಷಣಕ್ಕೆ ಡಿಪೋದವರು ಬೇರೆ ಬಸ್ಸು ಕಳುಹಿಸದ ಕಾರಣ ಉಳಿದ ಪ್ರಯಾಣಿಕರನ್ನು ಕರೆದೊಯ್ದು ಆ ಬಸ್ಸು ಅಂಕೋಲಾ ಕಡೆ ಸಾಗಿದೆ. ಈ ವೇಳೆ ಬಸ್ಸಿನ ಇಂಜಿನ್ ಭಾಗದಿಂದ ಹೊಗೆ ಬರುತ್ತಲೇ ಇದ್ದು, ಚಾಲಕ ಹೊಗೆ ಹೋಗಲಾಡಿಸಲು ನೀರು ಸುರಿದಿದ್ದಾರೆ. ಅದಾದ ನಂತರ ಪ್ರಯಾಣಿಕರು ಸಹ ತಾವು ದುಡ್ಡು ಕೊಟ್ಟು ಖರೀದಿಸಿದ್ದ ನೀರನ್ನು ಬಸ್ಸಿನ ಇಂಜಿನ್ ಕಡೆ ಸುರಿದಿದ್ದಾರೆ. ನೀರು ಹಾಕಿದ ಕೆಲ ಕಾಲ ಹೊಗೆ ಬರುವುದು ನಿಂತಿದ್ದು, ಹಾಗೇ ಬಸ್ಸು ಅಂಕೋಲಾವರೆಗೂ ಬಂದಿದೆ.
ಕುಮಟಾದಿAದ ಅಂಕೋಲಾಗೆ ಬರುವವರೆಗೂ 10ಕ್ಕೂ ಅಧಿಕ ಕಡೆ ಬಸ್ಸನ್ನು ನೀರು ಹಾಕುವುದಕ್ಕಾಗಿಯೇ ನಿಲ್ಲಿಸಲಾಯಿತು. ನೀರು ಸಿಕ್ಕ ಕಡೆಗಳೆಲ್ಲ ಪ್ರಯಾಣಿಕರ ಜೊತೆ ಚಾಲಕ-ನಿರ್ವಾಹಕರು ಬಾಟಲಿ ತುಂಬಿಸಿಕೊAಡು ಮುಂದೆ ಸಾಗಿದರು. ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗದಿದ್ದರೂ ಡಕೋಟಾ ಬಸ್ಸನ್ನು ಅನಿವಾರ್ಯವಾಗಿ ಅಂಕೋಲಾದವರೆಗೆ ಓಡಿಸಿದರು. ಬಸ್ ಚಲಿಸುವಾಗಲೇ ಪ್ರಯಾಣಿಕರು ನೀರು ಹಾಕಿ ಸಮಾಧಾನ ಮಾಡುತ್ತಿದ್ದು, ಆತಂಕದ ನಡುವೆಯೇ ಪ್ರಯಾಣ ಮುಂದುವರೆಸಿದರು.
`ಅAಕೋಲಾ ಸಾರಿಗೆ ಘಟಕದಲ್ಲಿ ಸಂಚರಿಸುತ್ತಿರುವ ಅನೇಕ ಬಸ್‌ಗಳು ಹಳೆಯದ್ದಾಗಿದೆ. ಹೀಗಾಗಿ ಇಂಥ ಘಟನೆಗಳು ಇಲ್ಲಿ ಸಾಮಾನ್ಯ’ ಎಂದು ಪ್ರಯಾಣಿಕರು ಹೇಳಿದರು.