ಭಾರೀ ಪ್ರಮಾಣದ ಬಿಸಿಲು ಬಿದ್ದ ಹಿನ್ನಲೆ ಶಿರಸಿಯ ಮಂಜಗುಣಿ ಬಳಿ ಬೆಟ್ಟಕ್ಕೆ ಬೆಂಕಿ ಬಿದ್ದಿದೆ. ಭರಸಗುಣಿಯ ಸಮೀಪ ಏಳು ಎಕರೆ ಗೇರು ತೋಟ ಹೊತ್ತಿ ಉರಿದಿದೆ. ಜೊತೆಗೆ ಪಕ್ಕದಲ್ಲಿದ್ದ ಅಕೇಶಿಯಾ, ಅಡಿಕೆ ತೋಟವೂ ಸುಟ್ಟು ಕರಕಲಾಗಿದೆ.
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿಸಿಲಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಬಿಸಿಲಿನ ಜೊತೆ ಬೆಂಕಿಯೂ ಕಾಣಿಸಿಕೊಂಡಿದೆ. ಅದರ ಪರಿಣಾಮ, ಬರಸಗುಣಿಯ ಶ್ರೀರಾಮ ಹೆಗಡೆ, ಸುಬ್ರಾಯ ಹೆಗಡೆ, ಶ್ರೀಪತಿ ಹೆಗಡೆ ಅವರು ಕಸಿ ಮಾಡಿದ 600ಕ್ಕೂ ಅಧಿಕ ಅಂಗುರಲಾ ಗೇರು ಗಿಡಗಳು ನಾಶವಾಗಿದೆ. ತಲಾ 100ರೂ ನೀಡಿ ಅವರು ತಂದು ನೆಟ್ಟಿದ್ದ ಏಳು ಎಕರೆ ಪ್ರದೇಶದಲ್ಲಿನ ಗೇರು ಗಿಡಗಳು ಸುಟ್ಟು ಕರಕಲಾಗಿದೆ. ಫಸಲು ಬರುವ ಮುನ್ನವೇ ಗಿಡ ಬಾಡಿದನ್ನು ನೋಡಿ ರೈತರು ಕಣ್ಣೀರಾಗಿದ್ದಾರೆ.
`ಗೇರು ಮರಕ್ಕೆ ಈ ವರ್ಷ ಫಸಲು ಬಂದಿತ್ತು. ಬಿಸಿಲಿನ ಕಾರಣಕ್ಕೆ ಕೊಯ್ಲು ಆಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ಭಾರಿ ಬಿಸಿಲಿಗೆ ಸುಟ್ಟು ಹೋಗಿದೆ’ ಎಂದು ರೈತರು ಅಳಲು ತೋಡಿಕೊಂಡರು. ಮನೆಯಿಂದ 1ಕಿಮಿ ದೂರದಲ್ಲಿ ತೋಟ ಇದ್ದು, ಸುದ್ದಿ ತಿಳಿದು ಜನರು ಬೆಂಕಿ ಕಂಡು ನಂದಿಸಲು ಮುಂದಾದರು. ಗಿಡ ಉಳಿಸಲು ಆಗಲಿಲ್ಲ. ಸಮೀಪವೇ ಇದ್ದ ಶಾರದಾ ಭಟ್ಟರ ಒಂದು ಎಕರೆ ಅಕೇಶಯಾ ಪ್ಲಾಟ ಸಹ ಈ ವೇಳೆ ಸುಟ್ಟು ಹೋಗಿದೆ. ನಾರಾಯಣ ಮರಾಠಿ ಅವರ ಸುಮಾರು ಅರ್ಧ ಎಕರೆ ಅಡಿಕೆ ತೋಟವು ಬೆಂಕಿಯ ಹಾನಿಗೆ ಒಳಗಾಗಿದೆ. ಪರಿಣಾಮ ಸುಮಾರು 10¯ಕ್ಷರೂ ಮೀರಿ ನಷ್ಟವಾಗಿದೆ.