ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದ ಹಳಿಯಾಳದ ಯಲ್ಲವ್ವಾ ಮುಮ್ಮಿಗಟ್ಟಿ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ತಲೆಗೆ ಪೆಟ್ಟಾಗಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ಯಲ್ಲವ್ವಾ ಗುರುಪಾದ ಮುಮ್ಮಿಗಟ್ಟಿ ಅವರು ವಾಸವಾಗಿದ್ದರು. 67 ವರ್ಷದ ಅವರು ಏಪ್ರಿಲ್ 21ರಂದು ಮಧ್ಯಾಹ್ನ ಶೌಚಾಲಯಕ್ಕೆ ಹೋಗಿದ್ದರು. ನೆಲ ತೇವವಾಗಿದ್ದರಿಂದ ಅವರು ಅಲ್ಲಿ ಕಾಲು ಜಾರಿ ಬಿದ್ದರು. ಪರಿಣಾಮ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದು, ಅವರನ್ನು ತಕ್ಷಣ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಧಾರವಾಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿಯೂ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದ ಕಾರಣ ಅದೇ ದಿನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಿರಂತರ ಆರೈಕೆ ಮಾಡಲಾಯಿತು. ಆದರೆ, ಮೂರು ದಿನ ಕಳೆದರೂ ಅವರು ಚೇತರಿಸಿಕೊಳ್ಳಲಿಲ್ಲ. ಏಪ್ರಿಲ್ 24ರಂದು ಸಂಜೆ 5.53ಕ್ಕೆ ಯಲ್ಲವ್ವಾ ಅವರು ಸಾವನಪ್ಪಿದರು. ಈ ಕುರಿತು ಮುತ್ತು ಜಯಪಾಲ ಕುಲಕರ್ಣಿ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.