ಶಿರಸಿಯ ಆಯುರ್ವೇದ ವೈದ್ಯ ಡಾ ರಮೇಶ ಕಲಗೂಟ್ಕರ್ ಅವರ ಕೊಲೆ ಪ್ರಕರಣ ಬೇದಿಸಿದ ಪೊಲೀಸರಿಗೆ 70 ವರ್ಷದ ವೃದ್ಧರೊಬ್ಬರು ಸಿಕ್ಕಿಬಿದ್ದಿದ್ದು, ಚಿನ್ನದ ಆಸೆಗಾಗಿ ಅವರೇ ಕೊಲೆ ಮಾಡಿರುವುದು ಖಚಿತವಾಗಿದೆ. 15 ಲಕ್ಷ ರೂ ಮೌಲ್ಯದ ಚಿನ್ನದ ಆಸೆಗೆ ಬಿದ್ದು ವೈದ್ಯರನ್ನು ಕೊಲೆ ಮಾಡಿದ ಮಂಜುನಾಥ ನಾಯ್ಕ ಇದೀಗ ಜೈಲು ಸೇರಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ಬಳಿಯ ಮಳಲೂರು ಪಡಲಬೈಲಿನಲ್ಲಿ ಮಂಜುನಾಥ ಲಿಂಗಯ್ಯ ನಾಯ್ಕ ಅವರು ವಾಸವಾಗಿದ್ದರು. ಹೊಟೇಲ್ ವ್ಯಾಪಾರ ಮಾಡಿಕೊಂಡು ಚನ್ನಾಗಿಯೇ ಇದ್ದ ಮಂಜುನಾಥ ನಾಯ್ಕ ಅವರಿಗೆ ಶಿರಸಿಯಲ್ಲಿ ಆಸ್ಪತ್ರೆ ನಡೆಸುತ್ತಿದ್ದ ಡಾ ರಮೇಶ ಕಲಗೂಟ್ಕರ್ ಅವರು ಪರಿಚಯವಾಗಿದ್ದರು. ಮಂಜುನಾಥ ನಾಯ್ಕ ಅವರು ಡಾ ರಮೇಶ ಕಲಗೂಟ್ಕರ್ ಅವರ ಸ್ನೇಹ ಸಂಪಾದಿಸಿ, ಅವರ ನಂಬಿಕೆಗಳಿಸಿದ್ದರು. ಹೀಗಾಗಿ ಡಾ ರಮೇಶ ಕಲಗೂಟ್ಕರ್ ಅವರು ತಮ್ಮ ಜೀವನದ ವಿಷಯಗಳನ್ನು ಮಂಜುನಾಥ ನಾಯ್ಕ ಅವರ ಬಳಿ ಹಂಚಿಕೊAಡಿದ್ದರು.
ಡಾ ರಮೇಶ ಕಲಗೂಟ್ಕರ್ ಅವರು ತಮ್ಮ ಮೊದಲ ಪತ್ನಿ ಸಾವನಪ್ಪಿದ ನಂತರ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದರು. ಸೋಮವಾರ ಅವರು ಹಸಮಣೆ ಏರಲಿದ್ದು, ಪತ್ನಿ ಸಂಬAಧಿಯನ್ನೇ ವರಿಸಲು ವೇದಿಕೆಯನ್ನು ಸಿದ್ಧಪಡಿಸಿದ್ದರು. ಮದುವೆ ದಿನ ಧರಿಸಲು ಬಂಗಾರದ ಆಭರಣಗಳನ್ನು ಸಹ ತಂದಿರಿಸಿಕೊAಡಿದ್ದರು. ಈ ವಿಷಯದ ಬಗ್ಗೆ ಅರಿತಿದ್ದ ಮಂಜುನಾಥ ನಾಯ್ಕ ಅವರು ಉಪಾಯವಾಗಿ ಡಾ ರಮೇಶ ಕಲಗೂಟ್ಕರ್ ಅವರ ಮನೆ ಸೇರಿ, ಅಲ್ಲಿದ್ದ ಬಂಗಾರ ಹಾಗೂ ಹಣದ ಆಸೆಗಾಗಿ ಡಾ ರಮೇಶ ಕಲಗೂಟ್ಕರ್ ಅವರನ್ನು ಕೊಲೆ ಮಾಡಿದರು. ನಂತರ ಆ ಹಣ ಹಾಗೂ ಬಂಗಾರ ದೋಚಿ, ಮನೆಗೆ ಬಾಗಿಲು ಹಾಕಿ ಪರಾರಿಯಾದರು.
ವೈದ್ಯರ ಸಾವಿನ ಬಗ್ಗೆ ಅರಿತು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಸ್ಥಳಕ್ಕೆ ದೌಡಾಯಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿದ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಎರಡು ವಿಶೇಷ ತಂಡ ರಚಿಸಿದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪಿಐ ಶಶಿಕಾಂತ ವರ್ಮಾ, ರಮೇಶ ಹೂಗಾರ್ ಅವರಿಗೆ ಕೆಲ ಸುಳಿವುಗಳು ದೊರೆತವು. ಪಿಸೈ ಬಸವರಾಜ ಕನಶೆಟ್ಟಿ ಅವರ ನೇತ್ರತ್ವದಲ್ಲಿ ಆರೋಪಿ ಶೋಧ ನಡೆದಿದ್ದು, ಎಸೈ ರವೀಂದ್ರ ನಾಯ್ಕ, ರವಿ ಗಾಂಜೇಕರ್, ಮಂಗಲಮೂರ್ತಿ ಶಿರಹಟ್ಟಿ ಜೊತೆ ಸಿಬ್ಬಂದಿ ಮಂಜುನಾಥ ಕೆಂಚರೆಡ್ಡಿ, ಪ್ರಸಾದ ಮಡಿವಾಳ, ಮಾರುತಿ ಮಳಗಿ, ಅರುಣ ಲಮಾಣಿ ತನಿಖೆ ಶುರು ಮಾಡಿದರು.
ಪೊಲೀಸ್ ಸಿಬ್ಬಂದಿ ಸಂದೀಪ ನಿಂಬಾಯಿ, ರಾಕೇಶ ದಯಾನಂದ, ಸಂತೋಷ, ಗಜಾನನ ಪೂಜಾರಿ ಜೊತೆ ಮಹಾಂತೇಶ, ಅರುಣ, ಗಣಪತಿ, ವೆಂಕಟ್ರಮಣ, ಪ್ರಶಾಂತ ಅವರು ಕಾರ್ಯಾಚರಣೆ ನಡೆಸಿದರು. ಕಾರವಾರ ಟೆಕ್ನಿಕಲ್ ವಿಭಾಗದ ಬಬನ ಕದಂ, ಉದಯ ಗುನಗಾ ಜೊತೆ ಜೀಪ್ ಚಾಲಕ ಹನುಮಂತ ವಾಲಿಕರ್, ಪಾಂಡು ನಗೋಜಿ ಅವರ ಸಹಕಾರದಲ್ಲಿ ಪೊಲೀಸರು ಆರೋಪಿ ಮಂಜುನಾಥ ನಾಯ್ಕ ಅವರನ್ನು ಹಿಡಿದರು. 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ ಹಣವನ್ನು ಪೊಲೀಸರು ಜಪ್ತು ಮಾಡಿದರು. ಮಂಜುನಾಥ ನಾಯ್ಕ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಜೈಲಿಗೆ ಕಳುಹಿಸಿದರು.