ಮುಂಡಗೋಡು ಅಗಡಿಯ ಸುರೇಶ ಅಕ್ಕಿ ಅವರ ಮನೆಗೆ ನುಗ್ಗಿದ 10ಕ್ಕೂ ಅಧಿಕ ಜನ ಕುಟುಂಬದವರ ಮೇಲೆ ಆಕ್ರಮಣ ಮಾಡಿದ್ದಾರೆ. ಇದನ್ನು ಸಹಿಸದ ಸುರೇಶ ಅಕ್ಕಿ ಅವರ ಸಹೋದರ ಪಕ್ಕಿರಪ್ಪ ಅಕ್ಕಿ ಅವರು ಅಲ್ಲಿಯೇ ವಿಷ ಸೇವಿಸಿದ್ದಾರೆ.
ಮುಂಡಗೋಡು ಅಗಡಿಯ ಸುರೇಶ ಅಕ್ಕಿ ಅವರು ರೈತಾಪಿ ಕೆಲಸ ಮಾಡಿಕೊಂಡಿದ್ದಾರೆ. ಅವರ ಮನೆಯಲ್ಲಿ ಗಿರಿಜಾ ಅಕ್ಕಿ, ಪಕ್ಕಿರಪ್ಪ ಅಕ್ಕಿ, ಲಕ್ಷಿö್ಮÃ ಅಕ್ಕಿ ಹಾಗೂ ಗಂಗವ್ವ ಅಕ್ಕಿ ಅವರು ವಾಸವಾಗಿದ್ದಾರೆ. ಅದೇ ಊರಿನ ಕಲ್ಲಪ್ಪ ತಳವಾರ, ಮಲ್ಲೇಶಿ ಲಮಾಣಿ, ಕನಕಪ್ಪ ಹರಿಜನ, ಕಲ್ಲಪ್ಪ ಕರಡಿಕೊಪ್ಪ ಹಾಗೂ ಸಜೀನ ಮಧು ನಾಯಕ ಅವರು ಸುರೇಶ ಅಕ್ಕಿ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ಆ ಆಗಂತುಕರ ಜೊತೆ ಮತ್ತೆ 10ಕ್ಕೂ ಅಧಿಕ ಜನ ಆಗಮಿಸಿದ್ದು, ಇದನ್ನು ನೋಡಿ ಸುರೇಶ ಅಕ್ಕಿ ಅವರ ಕುಟುಂಬದವರು ಕಂಗಾಲಾಗಿದ್ದಾರೆ. ಅವರೆಲ್ಲರೂ ಸೇರಿ ಸುರೇಶ ಅಕ್ಕಿ ಅವರನ್ನು ಹಿಡಿದು ಥಳಿಸಿದ್ದು, ಸುರೇಶ ಅಕ್ಕಿ ಅವರ ಪತ್ನಿ ಗಿರಿಜಾ ಅಕ್ಕಿ ಅವರ ಮೈ ಮುಟ್ಟಿದ್ದಾರೆ. ಇದನ್ನು ನೋಡಿ ಸಹಸಲಾಗದ ಸುರೇಶ ಅಕ್ಕಿ ಅವರ ತಮ್ಮ ಪಕ್ಕಿರಪ್ಪ ಅಕ್ಕಿ ಅವರು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಈ ಗಲಾಟೆ ಹಾಗೂ ಕ್ರಿಮಿನಾಶಕ ಸೇವನೆ ವಿಷಯದ ಬಗ್ಗೆ ಅರಿತ ಪೊಲೀಸರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.