ಒಂಟೆಗಳನ್ನು ಕೊಂದು ಅದರ ಮಾಂಸದ ಆಹಾರ ಬೇಯಿಸಲು ಉದ್ದೇಶಿಸಿದ್ದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. 3.25 ಲಕ್ಷ ರೂ ಮೌಲ್ಯದ ಎಂಟು ಒಂಟೆಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಮಧ್ಯಪ್ರದೇಶದ ಕರಣ ಬಾಬರ, ಕೊಲ್ಲಾಪುರದ ಸುಹಾಸ ಸೂರ್ಯವಂಶಿ ಹಾಗೂ ಯಶ ಗೋಟಕಿಂಡೆ ಅವರು ಭಟ್ಕಳಕ್ಕೆ ಒಂಟೆ ಸಾಗಾಟ ಮಾಡುತ್ತಿದ್ದರು. ಆ ಒಂಟೆಗಳನ್ನು ಮಾಂಸ ತಿನ್ನುವವರಿಗೆ ಮಾರಾಟ ಮಾಡಿ ಅದರಿಂದ ಕಾಸು ಸಂಪಾದಿಸಲು ಅವರು ಯೋಚಿಸಿದ್ದರು. ಶಿರಾಲಿ ಕಡೆಯಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಲಾರಿಗೆ ಪೊಲೀಸರು ಅಡ್ಡಲಾಗಿ ಕೈ ಮಾಡಿದರು.
ಆಗ, ಆ ಲಾರಿಯಲ್ಲಿ ಎಂಟು ಒಂಟೆಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿತು. ನೀರು-ಮೇವು ಇಲ್ಲದೇ ತೊಂದರೆ ಅನುಭವಿಸುತ್ತಿದ್ದ ಒಂಟೆಗಳನ್ನು ಪೊಲೀಸರು ರಕ್ಷಿಸಿದರು. ಅವುಗಳ ಸಾಗಾಟಕ್ಕೆ ಅನುಮತಿ ಇಲ್ಲದಿರುವುದನ್ನು ಗಮನಿಸಿದರು. ಲಾರಿ ಜೊತೆ ಒಂಟೆಗಳನ್ನು ವಶಕ್ಕೆಪಡೆದರು. ಪ್ರಕರಣ ದಾಖಲಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆ ಮೂವರನ್ನು ಬಂಧಿಸಿದರು.