ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಕಚೇರಿಗಳಲ್ಲಿ ಶಾಖಾಧಿಕಾರಿ ಹುದ್ದೆ ಭರ್ತಿ ಮಾಡಲು ಆಸಕ್ತಿವಹಿಸಿದೆ. ಒಟ್ಟು 19 ಹುದ್ದೆಗಳು ಖಾಲಿಯಿದ್ದು, ಅರ್ಹರ ಹುಡುಕಾಟ ನಡೆದಿದೆ.
ಈ ಪೈಕಿ 17 ಹುದ್ದೆಗಳಿಗೆ ಮೂಲ ವೃಂದದಡಿಯಲ್ಲಿ ಹಾಗೂ ಎರಡು ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ವೃಂದದಡಿ ನೇರ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಅರ್ಹರು ಅರ್ಜಿ ಸಲ್ಲಿಸುವ ಅವಕಾಶ ಕೊಡಲಾಗಿದೆ. ಅರ್ಜಿ ಸಲ್ಲಿಸಲು ಮೇ 15ಕ್ಕೆ ಕೊನೆ ದಿನ.
40 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಸಮುದಾಯದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಿಂದೂಳಿದ ಪ ವರ್ಗದ 43 ವಯಸ್ಸಿನವರಿಗೂ ಅವಕಾಶವಿದೆ. ಸಾಮಾನ್ಯ ವರ್ಗದವರಿಗೆ 1 ಸಾವಿರ ರೂ ಹಾಗೂ ಮೀಸಲಾತಿಯವರಿಗೆ 500ರೂ ಅರ್ಜಿ ಶುಲ್ಕವಿದೆ. ಸರಿಯಾಗಿ ಅರ್ಜಿ ಭರ್ತಿ ಮಾಡದೇ ಇದ್ದರೆ ಅಂಥ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ. ನೇಮಕಾತಿ ಹುದ್ದೆ ಎರಡು ವರ್ಷಗಳವರೆಗೆ ವಾಯಿದೆಯಿರಲಿದ್ದು, ಅಗತ್ಯವಿದ್ದರೆ ಅದನ್ನು ವಿಸ್ತರಿಸಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಕಾನೂನು ಪದವಿ ಪೂರೈಸಿದ ಬಗ್ಗೆ ದಾಖಲೆ, ಗೌರವಾನ್ವಿತ ವ್ಯಕ್ತಿಗಳಿಬ್ಬರ ಶಿಫಾರಸ್ಸು ಪತ್ರವನ್ನು ಅಭ್ಯರ್ಥಿಗಳು ಕೊಡಬೇಕು. ಶಾಖಾಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: ಶಾಖಾಧಿಕಾರಿ ಹುದ್ದೆಗೆ ಅರ್ಜಿ