ಸಿದ್ದಾಪುರದ ಇಜಾಜ್ ಶೇಖ್ ಅವರು ಬಿಕ್ಕಳಸೆಯ ಮಲ್ಲಿಕಾ ಮಡಿವಾಳ ಅವರನ್ನು ಪ್ರೀತಿಸಿ ಮೋಸ ಮಾಡಿದ್ದು, ಅದೇ ನೋವಿನಲ್ಲಿ ಮಲ್ಲಿಕಾ ಮಡಿವಾಳ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಮಲ್ಲಿಕಾ ಮಡಿವಾಳ ಅವರ ಸಹೋದರಿ ಮಾಲತಿ ಜಯರಾಜ್ ಅವರು ಇಜಾಜ್ ಶೇಖ್ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಬಿಕ್ಕಳಸೆಯಲ್ಲಿ ನಡೆದ ಹಿಂದೂ ಯುವತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಷಯವಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಲ್ಲಿಕಾ ಮಡಿವಾಳ ಅವರ ಆತ್ಮಹತ್ಯೆ ಪ್ರಕರಣವನ್ನು ಮೊದಲು `ಅಸ್ವಾಭಾವಿಕ ಸಾವು’ ಎಂದು ಪರಿಗಣಿಸಲಾಗಿದ್ದು, ಮಂಗಳವಾರ ಈ ಪ್ರಕರಣ ತಿರುವುಪಡೆದಿದೆ. ಇಜಾಜ್ ಶೇಖ್ ಅವರ ಪ್ರಚೋದನೆಯಿಂದ ಮಲ್ಲಿಕಾ ಮಡಿವಾಳ ಅವರು ಸಾವನಪ್ಪಿದ ಬಗ್ಗೆ ದೂರಲಾಗಿದೆ.
ಆರೋಪಿ ಇಜಾಜ್ ಶೇಖ್ ತಾನು ಮುಸ್ಲಿಂ ಎಂಬುದನ್ನು ಮರೆಮಾಚಿ ಮಲ್ಲಿಕಾ ಮಡಿವಾಳ ಅವರನ್ನು ಪ್ರೀತಿಸಿದ್ದು, ಅದಾದ ನಂತರ ಮದುವೆ ಆಗಲು ನಿರಾಕರಿಸಿದ್ದಾರೆ. ಆತನ ವಿಷಯ ಅರಿತ ಮಲ್ಲಿಕಾ ಮಡಿವಾಳ ಅವರು ಮಾರ್ಚ 15ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೊರಬಾ ರಸ್ತೆಯಲ್ಲಿನ ಅಂಗಡಿಯೊAದರಲ್ಲಿ ಕೆಲಸ ಮಾಡುವ ಇಜಾಜ್ ಶೇಖ್ ಪ್ರೀತಿ-ಪ್ರೇಮದ ನಾಟಕವಾಡಿ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನಲೆ ಆತ್ಮಹತ್ಯೆಗೆ ಒಳಗಾದ ಯುವತಿಯ ಮೊಬೈಲ್‌ಪಡೆದು ದಾಖಲೆ ಪರಿಶೀಲಿಸುವಂತೆ ಅವರ ಸಹೋದರಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಈ ಪ್ರಕರಣದ ತನಿಖೆಯಲ್ಲಿ ಯುವತಿಯ ಮೊಬೈಲ್ ಫೋನ್ ಅತ್ಯಂತ ನಿರ್ಣಾಯಕ ಸಾಕ್ಷಿಯಾಗಿದೆ. ಆದರೆ ಫೋನ್ ಲಾಕ್ ಆಗಿರುವುದರಿಂದ ಪೊಲೀಸರಿಗೆ ನೇರವಾಗಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎನ್ನುವ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ, ಫೋನ್ ಅನ್‌ಲಾಕ್ ಮಾಡಲು ಮತ್ತು ಅದರಲ್ಲಿರುವ ಕರೆಗಳ ವಿವರ ಹಾಗೂ ಇತರ ದತ್ತಾಂಶಗಳನ್ನು ಪಡೆಯಲು ಮೊಬೈಲ್ ಅನ್ನು ಈಗಾಗಲೇ ಎಫ್‌ಎಸ್‌ಎಲ್’ಗೆ ಕಳುಹಿಸಲಾಗಿದೆ.
ಘಟನಾ ಸ್ಥಳದಲ್ಲಿ ಲಭ್ಯವಾಗಿರುವ ಡೆತ್ ನೋಟ್‌ನಲ್ಲಿ ಯುವತಿಯು ಯಾರ ಮೇಲೆಯೂ ನೇರ ಆರೋಪ ಮಾಡಿಲ್ಲ. ಬದಲಾಗಿ ತನ್ನ ಕುಟುಂಬ ಮತ್ತು ತಾಯಿಯ ಬಗ್ಗೆ ಕಾಳಜಿಯ ಮಾತುಗಳನ್ನು ಬರೆದಿದ್ದಾರೆ.