ಯಲ್ಲಾಪುರ-ಅoಕೋಲಾ ಹೆದ್ದಾರಿಯ ಗುಳ್ಳಾಪುರದ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಗುಳ್ಳಾಪುರದ ಶಿವಾನಂದ ಅಂಬಿಗ ಅವರು ಸಾವನಪ್ಪಿದ್ದಾರೆ. ಜೊತೆಗೆ ಇನ್ನೂ ಮೂರು ಜನ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಸೋಮವಾರ ಸಂಬoಧಿಯೊಬ್ಬರ ಸಾವಿನ ಹಿನ್ನಲೆ ಶಿವಾನಂದ ಅಂಬಿಗ ಅವರು ತಮ್ಮ ಕುಟುಂಬದವರ ಜೊತೆ ಇಕೋ ಕಾರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಮನೆ ಕಡೆ ಬರುವಾಗ ಅವರು ಓಡಿಸುತ್ತಿದ್ದ ಇಕೋ ಕಾರಿಗೆ ಲಾರಿ ಗುದ್ದಿತು. ಈ ಅಪಘಾತದ ರಭಸಕ್ಕೆ ಶಿವಾನಂದ ಅಂಬಿಗ ಅವರು ಅಲ್ಲಿಯೇ ಸಾವನಪ್ಪಿದರು. ಕಾರಿನಲ್ಲಿದ್ದ ಇನ್ನಿತರರು ಗಂಭೀರವಾಗಿ ಗಾಯಗೊಂಡರು.
ಗೋಕಾಕ್‌ನಿAದ ಎಂ-ಸ್ಯಾoಡ್ ತುಂಬಿಕೊoಡು ಬಂದ ಲಾರಿ ವೇಗವಾಗಿ ಚಲಿಸಿದ್ದು, ಈ ಅಪಘಾತಕ್ಕೆ ಕಾರಣ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದರಿಂದ ಆರೋಪಿಯ ಶೋಧ ನಡೆದಿದೆ. ಅಪಘಾತದ ವೇಳೆ ಕಾರಿನಲ್ಲಿ ನಾಲ್ಕು ಜನರಿದ್ದು, ಗಾಯಗೊಂಡವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಲಾರಿ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.