ಮುರುಡೇಶ್ವರ ಬಳಿಯ ಕಾಯ್ಕಿಣಿಯ ಕುಮಾರ ಬಾಕಡ ಅವರು ಅದೇ ಊರಿನ ಮೂವರ ಜೊತೆ ಜಗಳ ಮಾಡಿದ್ದಾರೆ. ಪರಿಣಾಮ ಚಂದ್ರು ಬಾಕಡ, ಶ್ರೀಧರ ಬಾಕಡ ಹಾಗೂ ರವಿ ಬಾಕಡ ಸೇರಿ ಕುಮಾರ ಬಾಕಡ ಅವರನ್ನು ಹಿಡಿದು ಥಳಿಸಿದ್ದಾರೆ.
ಭಟ್ಕಳದ ಮುರುಡೇಶ್ವರದ ಕಾಯ್ಕಿಣಿ ಗುಮ್ಮನಹಕ್ಲುವಿನ ಬಾಕಡಕೇರಿಯ ಕುಮಾರ ಶ್ರೀನಿವಾಸ ಬಾಕಡ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಏಪ್ರಿಲ್ 19ರಂದು ಕೋಟದಮಕ್ಕಿ ಬಳಿಯ ಜ್ಯೋತಿ ವೈನ್ ಶಾಪ್ ಬಳಿ ಹೋಗಿದ್ದು, ಅಲ್ಲಿಯೇ ಹೊಡೆದಾಟ ನಡೆದಿದೆ. ಚಂದ್ರು ಮಾದೇವ ಬಾಕಡ ಹಾಗೂ ಕುಮಾರ ಶ್ರೀನಿವಾಸ ಬಾಕಡ ಅವರ ನಡುವೆ ಮೊದಲಿನಿಂದಲೂ ವೈಮನಸ್ಸಿದ್ದು, ಇದೇ ಹೊಡೆದಾಟಕ್ಕೆ ಮುಖ್ಯ ಕಾರಣ.
`ಚಂದ್ರು ಬಾಕಡ ಅವರು ಸರಾಯಿ ಕುಡಿದು ಜಗಳ ಮಾಡುತ್ತಿದ್ದು, ಅನಗತ್ಯವಾಗಿ ತಮ್ಮನ್ನು ಗುರಾಯಿಸುತ್ತಾರೆ’ ಎಂಬುದು ಕುಮಾರ ಬಾಕಡ ಅವರ ದೂರು. `ಆ ದಿನ ಕೋಟದಮಕ್ಕಿ ಬಳಿಯ ಜ್ಯೋತಿ ವೈನ್ ಶಾಪ್ ಬಳಿ ಚಂದ್ರು ಬಾಕಡ ಅವರ ಜೊತೆ ಶ್ರೀಧರ ಬಾಬು ಬಾಕಡ ಹಾಗೂ ರವಿ ಮಾದವ ಬಾಕಡ ಸಹ ಇದ್ದರು. ತಾನು ಅಲ್ಲಿ ಹೋದಾಗ ಅವರೆಲ್ಲರೂ ಬೈದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಹೊಡೆದರು’ ಎಂದು ಕುಮಾರ ಬಾಕಡ ಅವರು ದೂರಿದ್ದಾರೆ. `ಈ ವೇಳೆ ಕಲ್ಲಿನಿಂದ ತಮ್ಮ ಮೇಲೆ ಹಲ್ಲೆ ನಡೆದಿದೆ’ ಎಂದವರು ಮುರುಡೇಶ್ವರ ಪೊಲೀಸರಲ್ಲಿ ಹೇಳಿದ್ದಾರೆ.