ಕುಮಟಾದ ಹೆಗಡೆಯಲ್ಲಿದ್ದ ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಈ ಅವಘಡ ನಡೆದಿದೆ.
ಮೇ 13ರ ಮಧ್ಯಾಹ್ನದ ವೇಳೆ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಗೆ ಬರುವುದನ್ನು ಅಲ್ಲಿನವರು ನೋಡಿದ್ದಾರೆ. ನಂತರ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ.
ಬುಧವಾರ ಕಾರ್ಮಿಕರಿಗೆ ರಜೆ ಇದ್ದ ಕಾರಣ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಬೆಂಕಿ ದೊಡ್ಡದಾಗುವವರೆಗೂ ಜನರಿಗೆ ಗಮನಕ್ಕೆ ಬರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಭಾರೀ ಪ್ರಮಾಣದಲ್ಲಿ ನೀರು ಹಾಯಿಸಿ ಬೆಂಕಿ ಆರಿಸಿದ್ದರಿಂದ ದೊಡ್ಡ ಅವಘಡ ನಡೆಯಲಿಲ್ಲ. ಘನತ್ಯಾಜ್ಯ ಘಟಕವನ್ನು ನಿರ್ವಹಿಸುತ್ತಿದ್ದ ರಕ್ಷಾ ಸಂಜೀವಿನಿ ಘಟಕದ ಅಧ್ಯಕ್ಷೆ ನಾಗವೇಣಿ ಮುಕ್ರಿ, ಪ್ರಮುಖರಾದ ಶಾಂತರಾಮ ನಾಯ್ಕ, ಶಿವಾನಂದ ಪಟಗಾರ ಅವರ ಜೊತೆ ಗ್ರಾ ಪಂ ಸಿಬ್ಬಂದಿ ವಸಂತ ನಾಯಕ, ನಾರಾಯಣ ನಾಯಕ, ಗೌರಿ ಮುಕ್ರಿ, ನೀತಾ ಮಡಿವಾಳ ಅವರು ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ