ಶಿರಸಿ ರಾಮನಬೈಲಿನ ಪೈಜಾನ್ ಮುಲ್ಲಾ ಅವರು ಮಾದಕ ವ್ಯಸನ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. 22ನೇ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದ ಪೈಜಾನ್ ಮುಲ್ಲಾ ಅವರಿಗೆ ಪಿಸೈ ನರಸಿಂಹಲು ಅವರು ಬುದ್ದಿಮಾತು ಹೇಳಿದ್ದಾರೆ.
ಶಿರಸಿ ರಾಮನಬೈಲಿನ ಕನ್ನಡ ಶಾಲೆ ಬಳಿ ಪೈಜಾನ್ ಅಬ್ದುಲ್ ಸಮದ್ ಮುಲ್ಲಾ ಅವರು ವಾಸವಾಗಿದ್ದಾರೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಅವರು ಮೋಜು-ಮಸ್ತಿಗಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೇ 11ರಂದು ಶಿರಸಿ ನಗರದ ಕ್ಯಾಪ್ಟನ್ ಕ್ಯಾಂಪ್ ಕಡೆ ಹೋಗುವ ಕಚ್ಚಾ ರಸ್ತೆಯಲ್ಲಿ ಅನುಮಾನಾಸ್ಪದ ರೀತಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಾತನಾಡಲು ಬಾರದ ಸ್ಥಿತಿಯಲ್ಲಿದ್ದ ಪೈಜಾನ್ ಮುಲ್ಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಶಿರಸಿ ಪಂಡಿತ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಪೈಜಾನ್ ಮುಲ್ಲಾ ಅವರು ಗಾಂಜಾ ಸೇವಿಸಿರುವುದು ದೃಢವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.