ಶಿರಸಿ ದಾಸನಕೊಪ್ಪದ ಕಾಳಂಗಿ ವ್ಯವಸಾಯ ಸಹಕಾರಿ ಸಂಘದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ಕಾಗದ ಪತ್ರಗಳಲ್ಲಿ ಲಕ್ಷ ಲಕ್ಷ ಲಾಭ ತೋರಿಸಿರುವ ಸೊಸೈಟಿ ಬಳಿ ಹೂಡಿಕೆದಾರರ ಠೇವಣಿ ಮರಳಿಸಲು ಸಹ ಕಾಸಿಲ್ಲ. ಠೇವಣಿ ಹಣ ಮರಳಿಸುವಂತೆ ಆಗ್ರಹಿಸಿ ಸೊಸೈಟಿ ಸದಸ್ಯರು ಶುಕ್ರವಾರ ಎರಡನೇ ಹಂತದ ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಗೆ ಸೊಸೈಟಿಯಿಂದ 69 ಲಕ್ಷ ರೂ ಅಕ್ರಮವಾಗಿ ವರ್ಗವಾಗಿರುವು ವಿಷಯ ಈ ದಿನದ ಪ್ರತಿಭಟನೆಯಲ್ಲಿಯೂ ಪ್ರತಿಧ್ವನಿಸಿದೆ. ಇದರೊಂದಿಗೆ 1.88 ಕೋಟಿ ರೂ ಅಕ್ರಮ ಹಣಕಾಸು ವ್ಯವಹಾರ ನಡೆದ ಬಗ್ಗೆಯೂ ಪ್ರತಿಭಟನಾಕಾರರು ದೂರಿದ್ದಾರೆ. ಕಳೆದ ಒಂದು ತಿಂಗಳಿನಿAದ ಸೊಸೈಟಿ ಅಪರಾತಪರದ ಬಗ್ಗೆ ಎಲ್ಲಡೆ ಚರ್ಚೆ ನಡೆಯುತ್ತಿದ್ದು, ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾಲದ ಹಣ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಈವರೆಗೂ ಸ್ಪಷ್ಟನೆ ಸಿಕ್ಕಿಲ್ಲ.
ಇಲ್ಲಿನ ಸುಮಂತ ಧನಂಜಯ ಸಾಕಣ್ಣನವರ್ ಹಾಗೂ ನಂಜುAಡಿ ಸಾಕಣ್ಣನವರ್ ಎಂಬ ರೈತರ ಹೆಸರಿನಲ್ಲಿ ವಂಚನೆಯಿAದ ಸಾಲಪಡೆದ ಬಗ್ಗೆ ಆಡಳಿತ ಮಂಡಳಿಯವರು ಮಾತನಾಡುತ್ತಿಲ್ಲ. ಈ ಎಲ್ಲಾ ಹಿನ್ನಲೆ ಶುಕ್ರವಾರ ಸೊಸೈಟಿ ಸದಸ್ಯರು ಎರಡನೇ ಹಂತದ ಪ್ರತಿಭಟನೆ ನಡೆಸಿದ್ದಾರೆ. ಠೇವಣಿ ಹಣವನ್ನು ಮರಳಿಸುವಂತೆ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ, ಸೊಸೈಟಿ ಖಾತೆಯಲ್ಲಿ ಹಣವಿಲ್ಲ ಎಂಬ ವಿಷಯ ಅರಿತು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಕೆಲ ಸದಸ್ಯರಿಗೆ ಮಾತ್ರ ಸೊಸೈಟಿಯವರು 25 ಸಾವಿರ ರೂ ಹಣ ಮರಳಿಸಿದ್ದು, ಲಕ್ಷಾಂತರ ರೂ ಠೇವಣಿಯಿರಿಸಿದವರು ಕಂಗಾಲಾಗಿದ್ದಾರೆ. ಹಿಪ್ಪನಳ್ಳಿ ಹಾಗೂ ಗೋಳಿ ಸೊಸೈಟಿ ದಾರಿಯಲ್ಲಿಯೇ ದಾಸನಕೊಪ್ಪದ ಕಾಳಂಗಿ ಸೊಸೈಟಿಯೂ ಹಾದಿ ತಪ್ಪಿದ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಧರಣಿಯಲ್ಲಿ `ಸಹಕಾರ ನಿಬಂಧಕರು ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. `ಸೊಸೈಟಿ ಹಣ ನುಂಗಿದ ಭ್ರಷ್ಟರ ಆಸ್ತಿ ಜಪ್ತು ಮಾಡಿ’ ಎಂದು ಸಹ ಒತ್ತಾಯಿಸಿದ್ದಾರೆ. ಸೊಸೈಟಿ ಎದುರು ಪ್ರತಿಭಟನೆ ನಡೆದಿದ್ದು, ರೈತರು ಅನೇಕರ ವಿರುದ್ಧ ಘೋಷಣೆ ಕೂಗಿದ್ದಾರೆ. `17 ಲಕ್ಷ ಲಾಭ ಎಂದು ತೋರಿಸಿ ಇದೀಗ ನಷ್ಟ ಎನ್ನಲಾಗುತ್ತಿದೆ. ತಿಂಗಳುಗಳಿAದ ಕೇಳಿದರೂ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಅಧಿಕಾರಿಗಳು ಸಹ ವರದಿ ನೀಡುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.