`ಮುತೂಡ್ ಪಿನ್‌ಕಾರ್ಪಿನಿಂದ ಚಿನ್ನ ಬಿಡಿಸಿಕೊಂಡು ಬರುವೆ’ ಎಂದು ಮಣಿಪುರಂ ಫೈನಾನಿನವರನ್ನು ನಂಬಿಸಿದ ಹಳಿಯಾಳದ ರಾಕೇಶ ವಾಲೇಕರ್ ಅವರು 2.70 ಲಕ್ಷ ರೂ ಹಣಪಡೆದು ಮೋಸ ಮಾಡಿದ್ದಾರೆ. ಚಿನ್ನ ಬರುವ ಆಸೆಗಾಗಿ ಆರ್ಥಿಕ ನೆರವು ನೀಡಿದ ಮಣಿಪುರಂ ಫೈನಾನ್ಸಿನವರು ಇದೀಗ `ಚಿನ್ನವೂ ಇಲ್ಲ. ಕೊಟ್ಟ ಹಣವೂ ಬಂದಿಲ್ಲ’ ಎಂಬ ಕಾರಣಕ್ಕೆ ಪೊಲೀಸರ ಮೊರೆ ಹೋಗಿದ್ದಾರೆ.
Advertisement. Scroll to continue reading.
Advertisement. Scroll to continue reading.
ಹಳಿಯಾಳ ಬಸ್ ನಿಲ್ದಾಣದ ಬಳಿ ರಾಕೇಶ ದಿನಕರ್ ವಾಲೇಕರ್ ಅವರು ವಾಸವಾಗಿದ್ದಾರೆ. ಅವರು ಮಣಿಪುರಂ ಫೈನಾನ್ಸಿಗೆ ಹೋಗಿ ವಿವಿಧ ದಾಖಲೆಗಳನ್ನು ನೀಡಿದ್ದಾರೆ. ಶಿರಸಿ ಕಾಳಂಗಿಯ ಸಿದ್ದಲಿಂಗೇಶ ವೀರೇಶ ಕಲ್ಮಟ್ಟಿ ಅವರು ಹಳಿಯಾಳದಲ್ಲಿ ಮಣಪುರಂ ಫೈನಾನ್ಸ್ ಮ್ಯಾನೇಜರ್ ಆಗಿದ್ದು, ರಾಕೇಶ್ ವಾಲೇಕರ್ ಅವರು ಸಿದ್ದಲಿಂಗೇಶ ಕಲ್ಮಟ್ಟಿ ಅವರ ನಂಬಿಕೆಗಳಿಸಿ ಹಣಪಡೆದಿದ್ದಾರೆ. ಈ ವೇಳೆ `ಮುತೂಡ್ ಪಿನ್‌ಕಾರ್ಪಿನಿಂದ ಚಿನ್ನ ಬಿಡಿಸಿಕೊಂ ಬಂದು ತಮಗೆ ಕೊಡುವೆ’ ಎಂದು ಭರವಸೆ ನೀಡಿದ್ದಾರೆ. ಆದರೆ, ಅದಾದ ನಂತರ ರಾಕೇಶ್ ವಾಲೇಕರ್ ಅವರು ಮಣಿಪುರಂ ಫೈನಾನ್ಸ್ ಕಚೇರಿ ಕಡೆ ತಲೆಯನ್ನೇ ಹಾಕಿಲ್ಲ.
Advertisement. Scroll to continue reading.
ಮಾರ್ಚ 4ರಂದು ರಾಕೇಶ್ ವಾಲೇಕರ್ ಅವರು ಹಣಪಡೆದಿದ್ದು, ಎರಡು ತಿಂಗಳು ಕಳೆದರೂ ಬಾರದ ಕಾರಣ ಸಿದ್ದಲಿಂಗೇಶ ಕಲ್ಮಟ್ಟಿ ಅವರು ಆ ಬಗ್ಗೆ ವಿಚಾರಿಸಿದ್ದಾರೆ. ಆಗ, ಮೋಸ ಮಾಡುವ ಉದ್ದೇಶದಿಂದಲೇ ರಾಕೇಶ್ ವಾಲೇಕರ್ ಈ ರೀತಿ ಮಾಡಿರುವುದು ಗೊತ್ತಾಗಿದೆ. ಈ ಹಿನ್ನಲೆ ಸಿದ್ಧಲಿಂಗೇಶ್ ಕಲ್ಮಟ್ಟಿ ಅವರು ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.